ಬೆಂಗಳೂರು: ಇಂದಿನಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 3 ರೂ. ಹೆಚ್ಚಳವಾಗಲಿದೆ. ಟೋನ್ಡ್ ಹಾಲಿನ ಹಿಂದಿನ ದರ 39 ರೂ., ಪರಿಷ್ಕೃತ ದರ 42 ರೂ. ಆಗಲಿದೆ. ಹೋಮೋಜಿನೈಸ್ಡ್ ಹಾಲಿನ ಹಿಂದಿನ ದರ 40 ರೂ., ಪರಿಷ್ಕೃತ ದರ 43 ರೂ. ಹಸುವಿನ ಹಾಲು(ಹಸಿರು ಪೊಟ್ಟಣ) ಹಿಂದಿನ ದರ 43, ಪರಿಷ್ಕೃತ ದರ 46 ರೂ. ಶುಭಂ ಹಾಲಿನ ಹಿಂದಿನ ದರ 45 ರೂಪಾಯಿ, ಪರಿಷ್ಕೃತ ದರ 48 ರೂ. ಮೊಸರು ಪ್ರತಿ ಲೀಟರ್ಗೆ ಹಿಂದಿನ ದರ 47 ರೂ., ಪರಿಷ್ಕೃತ ದರ 50 ರೂ. ಮಜ್ಜಿಗೆ 200mಟ ಹಿಂದಿನ ದರ 8 ರೂಪಾಯಿ, ಪರಿಷ್ಕೃತ ದರ 9 ರೂ. ಆಗಲಿದೆ.
ಇದರ ಜೊತೆಗೆ ಇಂದಿನಿಂದ ಹೋಟೆಲ್ ತಿಂಡಿ, ಆಹಾರದ ಮೇಲೆ ಶೇ.10ರಷ್ಟು ದರ ಏರಿಕೆಯಾಗಲಿದೆ. ಹಾಲು, ವಿದ್ಯುತ್, ಅಗತ್ಯ ವಸ್ತುಗಳ ದರ ಏರಿಕೆ ಹಿನ್ನೆಲೆ ಹೋಟೆಲ್ ತಿಂಡಿ, ಊಟ, ಟೀ, ಕಾಫಿ, ಆಹಾರಗಳ ದರ ಏರಿಕೆ ಮಾಡಲಾಗುತ್ತಿದೆ. ಇಂದಿನಿಂದ ಹೋಟೆಲ್ ಆಹಾರದ ಪರಿಷ್ಕೃತ ದರ ಜಾರಿಯಾಗಲಿದೆ.
ರಾಜ್ಯ ಸರ್ಕಾರದ ಬಜೆಟ್ನಲ್ಲಿ ರಾಜಸ್ವ ಏರಿಕೆ ಹಿನ್ನೆಲೆ ಇಂದಿನಿಂದ ಮರಳು, ಜಲ್ಲಿ, ಗ್ರಾನೈಟ್, ಕಬ್ಬಿಣ ಮತ್ತಷ್ಟು ದುಬಾರಿಯಾಗಲಿದೆ. ಮರಳು, ಎಂ-ಸ್ಯಾಂಡ್, ಜಲ್ಲಿಕಲ್ಲು, ಗ್ರಾನೈಟ್ ಬಂಡೆ, ಕಬ್ಬಿಣ ಮನೆ ನಿರ್ಮಾಣದ ಇನ್ನಿತರ ವಸ್ತುಗಳ ಪರಿಷ್ಕೃತ ದರ ಜಾರಿಯಾಗಿದ್ದು ಇಂದಿನಿಂದ ಮನೆ ನಿರ್ಮಾಣದ ವಸ್ತುಗಳು ದುಬಾರಿಯಾಗಲಿವೆ.