ಬೆಂಗಳೂರು: ಬೀಡಿ. ಸಿಗರೇಟ್. ಬೀಡಾ , ಗುಟ್ಕಾ ಶಾಪ್‌ಗಳು, ಬೇಕರಿ, ಚಿಲ್ಲರೆ ಅಂಗಡಿಗಳು, ಫುಟ್‌ಪಾತ್‌ ಅಂಗಡಿಗಳು ಇನ್ನು ಮುಂದೆ ಬಿಬಿಎಂಪಿಯಿಂದ ಕಡ್ಡಾಯವಾಗಿ ಲೈಸನ್ಸ್‌ ಪಡೆದಿರಬೇಕು ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಹೊಸ ನಿಯಮ ಜಾರಿಗೊಳಿಸಿದೆ.

ವರ್ಷಕ್ಕೆ 500 ರೂ ಹಣ ಪಾವತಿ ಮಾಡಿ ಲೈಸೆನ್ಸ್ ಪಡೆಯಬೇಕು. ನಗರದಲ್ಲಿ 60 ಸಾವಿರಕ್ಕೂ ಅಧಿಕ ಈ ರೀತಿಯ ನಾನಾ ಅಂಗಡಿಗಳಿವೆ. ಲೈಸನ್ಸ್‌ ಇಲ್ಲದೆ ಈ ಅಂಗಡಿಗಳಲ್ಲಿ ಮಾರಾಟ ಪತ್ತೆಯಾದರೆ ಮೊದಲ ಬಾರಿಗೆ 5 ಸಾವಿರ ರೂ. ದಂಡದ ಜೊತೆಗೆ ಬಳಿಕ ಪ್ರತಿದಿನ ನಂತರ ಪ್ರತಿದಿನ 100 ರೂ. ದಂಡ ಪಾವತಿಸಬೇಕಾಗುತ್ತದೆ. ಸೆಪ್ಟೆಂಬರ್ ಮೊದಲ ವಾರದಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರು  ತಿಳಿಸಿದ್ದಾರೆ.