ಬೆಂಗಳೂರು: ಧೋತಿ ಉಟ್ಟು ಬಂದ ರೈತನಿಗೆ ಜಿ.ಟಿ ಮಾಲ್​ ಪ್ರವೇಶ ನಿರಾಕರಿಸಿ ಅಪಮಾನ ಮಾಡಿತ್ತು. ಪಂಚೆ ತೊಟ್ಟ ಪ್ರಾಯಸ್ತ ವ್ಯಕ್ತಿಗೆ ನೋ ಎಂಟ್ರಿ ಎಂದು ಹೇಳಿತ್ತು. ಆದರೀಗ ರೈತನಿಗೆ ಅಪಮಾನ ಮಾಡಿದ ಜಿ.ಟಿ ಮಾಲ್​ಗೆ ಸರ್ಕಾರ ತಕ್ಕಪಾಠ ಕಲಿಸಲು ಮುಂದಾಗಿದೆ.

ರೈತನಿಗೆ ಅಪಮಾನ ಮಾಡಿದ ಜಿ.ಟಿ. ಮಾಲ್ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದೆ. 7 ದಿನಗಳ ಕಾಲ ಮಾಲ್​ ಕ್ಲೋಸ್ ಮಾಡಲು ಬಿಬಿಎಂಪಿ ಮುಂದಾಗಿದೆ. ಸರ್ಕಾರ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಸೂಚನೆ ಮೇರೆಗೆ ಜಿ.ಟಿ.ಮಾಲ್ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ. ವಲಯ ಆಯುಕ್ತರ ತಂಡ ಕೆಲವೇ ಹೊತ್ತಲ್ಲಿ ಜಿ.ಟಿ. ಮಾಲ್ ಗೆ ತೆರಳಲಿದ್ದು, ಬಳಿಕ ಜಿ.ಟಿ ಮಾಲ್​ ಅನ್ನು ಒಂದು ವಾರಗಳ ಕಾಲ ಲಾಕ್​ ಮಾಡಲಿದ್ದಾರೆ.

ಇಂದು ನಡೆದ ಸದನದಲ್ಲೂ ಇದೇ ವಿಚಾರದ ಕುರಿತು ಚರ್ಚೆ ನಡೆದಿದೆ. ಸಚಿವ ಭೈರತಿ ಸುರೇಶ್ ಕೂಡ ಈ ವಿಚಾರವಾಗಿ ಮಾತನಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಹೇಳಿದ್ದಾರೆ.