ಬೆಂಗಳೂರು: ಕಳೆದ ಮೇ15 ರಂದು ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಬುದ್ಧ ಕೊಲೆ ಪ್ರಕರಣ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಪ್ರಬುದ್ಧ ಅವರ ಕೊಲೆಗೆ ದಿಗ್ಬ್ರಾಂತರಾಗಿದ್ದ ತಾಯಿ ಸೌಮ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಪ್ರಕರಣದಲ್ಲಿ ಪೊಲೀಸರ ಅಸಹಕಾರ, ಉದ್ದೇಶಪೂರ್ವಕ ನಿರ್ಲಕ್ಷತೆ, ಸಾಕ್ಷಿ ನಾಶ ಯತ್ನ ನಡೆದಿದೆ. ಸಂತ್ರಸ್ಥ ತಾಯಿಯಾದ ನನಗೂ ಬೆದರಿಕೆ ಹಾಕಲಾಗುತ್ತಿದೆ. ಹೀಗಾಗಿ ಸಿಐಡಿ ತನಿಖೆಗೆ ವಹಿಸಲು ಒತ್ತಾಯಿಸಿದ್ದರು.
ಯುವತಿ ಪ್ರಬುದ್ಧ ತಾಯಿಯ ಮನವಿ ಹಿನ್ನೆಲೆಯಲ್ಲಿ ಕೊಲೆ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ವಹಿಸಲು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಸೂಚನೆ ನೀಡಿದ್ದಾರೆ.

