ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಈ ವಾರವೂ ಮುಂದುವರಿಯುತ್ತಿದೆ. ಕಳೆದ ಒಂದು ವಾರದಿಂದ ಈ ಎರಡೂ ಲೋಹಗಳ ಬೆಲೆ ಬಹಳ ತೀವ್ರ ಗತಿಯಲ್ಲಿ ಹೆಚ್ಚಳಗೊಂಡಿದೆ. ಕಳೆದ ಕೆಲ ದಿನಗಳಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 70 ರೂಗಿಂತಲೂ ಮೇಲೇರಿದೆ.
ಮಲೇಷ್ಯಾದಲ್ಲಿ ಮಾತ್ರ ಕೆಲ ತಿಂಗಳಿಂದ ಬೆಲೆ ಸ್ಥಿರವಾಗಿದೆ. ಅದು ಬಿಟ್ಟರೆ ಉಳಿದ ಕಡೆ ಬೆಲೆಯಲ್ಲಿ ನಿತ್ಯವೂ ವ್ಯತ್ಯಯವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,450 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,760 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,050 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 58,450 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,800 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)., ಬೆಂಗಳೂರು: 58,450 ರೂ., ಚೆನ್ನೈ: 59,150 ರೂ., ಮುಂಬೈ: 58,450 ರೂ., ದೆಹಲಿ: 58,600 ರೂ., ಕೋಲ್ಕತಾ: 58,450 ರೂ., ಕೇರಳ: 58,450 ರೂ., ಅಹ್ಮದಾಬಾದ್: 58,500 ರೂ., ಜೈಪುರ್: 58,600 ರೂ., ಲಕ್ನೋ: 58,600 ರೂ., ಭುವನೇಶ್ವರ್: 58,450 ರೂಪಾಯಿಯಿದೆ.