ಬೆಂಗಳೂರು:  ದೇಶದ ವಿತ್ತೀಯ ಕೊರತೆ (ಸಿಎಡಿ) ಮೇಲೆ ಪರಿಣಾಮ ಬೀರುವಂಥ ಭಾರತದ ಚಿನ್ನದ (Gold Rate) ಆಮದು 2024-25ರ ಏಪ್ರಿಲ್-ಜುಲೈ ಅವಧಿಯಲ್ಲಿ 4.23% ರಷ್ಟು ಇಳಿದು 10 ಲಕ್ಷ ಕೋಟಿ ರೂಪಾಯಿಗೆ ನಿಂತಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. 2023ರ ಏಪ್ರಿಲ್-ಜುಲೈನಲ್ಲಿ ಆಮದು 11 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಜುಲೈನಲ್ಲಿ ಆಮದು ಪ್ರಮಾಣ ಶೇ.1.06ರಷ್ಟು ಇಳಿಕೆಯಾಗಿದ್ದು, 2 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಒಳಬರುವ ಚಿನ್ನದ ಪ್ರಮಾಣವು ಜೂನ್ (-38.66%) ಮತ್ತು ಮೇ (-9.76%) ರಷ್ಟು ನಕಾರಾತ್ಮಕ ಬೆಳವಣಿಗೆ ಕಂಡಿತ್ತು. ಏಪ್ರಿಲ್​​ನಲ್ಲಿ ಆಮದು 61 ಸಾವಿರ ಕೋಟಿ ರೂಪಾಯಿಯಷ್ಟಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಕೆ ಕಂಡಿದ್ದು ಆಗಸ್ಟ್ 14ರಂದು ಡೆಲ್ಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 300 ರೂ.ಏರಿಕೆಯಾಗಿದ್ದು ಒಟ್ಟು 73,150 ರೂಪಾಯಿಗೆ ತಲುಪಿದೆ. 2023-24ರಲ್ಲಿ ಭಾರತದ ಚಿನ್ನದ ಆಮದು ಶೇ.30ರಷ್ಟು ಏರಿಕೆಯಾಗಿ 3.8 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

ಸ್ವಿಟ್ಜರ್ಲೆಂಡ್ ಚಿನ್ನದ ಆಮದಿನ ಅತಿದೊಡ್ಡ ಮೂಲವಾಗಿದ್ದು, ಸುಮಾರು 40% ಪಾಲನ್ನು ಹೊಂದಿದೆ. ನಂತರ ಯುಎಇ (16% ಕ್ಕಿಂತ ಹೆಚ್ಚು) ಮತ್ತು ದಕ್ಷಿಣ ಆಫ್ರಿಕಾ (ಸುಮಾರು 10%). ರಷ್ಟು ಚಿನ್ನವನ್ನು ಭಾರತಕ್ಕೆ ರಫ್ತು ಮಾಡುತ್ತದೆ. ದೇಶದ ಒಟ್ಟು ಆಮದಿನಲ್ಲಿ ಈ ಚಿನ್ನದ ಪಾಲು ಶೇ.5ರಷ್ಟಿದೆ.