ಬೆಂಗಳೂರು : ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ತಂಡಗಳು ಸೆಣಸಲಿವೆ. ಆರ್ಸಿಬಿ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಿದ್ದು, ಆರ್ಸಿಬಿ ಕ್ರೇಜ್ ಯಾವ ಮಟ್ಟಿಗೆ ಇದೆ ಅಂದರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್‌ನ ಮಾಲೀಕರು ಉಚಿತ ಚಾಟ್ಸ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.
ಆರ್‌ಸಿಬಿ ಕಟ್ಟಾ ಅಭಿಮಾನಿಯಾಗಿರೋ ಚಾಟ್ಸ್ ಮಾಲೀಕರು ತಮ್ಮ ನೆಚ್ಚಿನ ತಂಡ ಫೈನಲ್ ಪ್ರವೇಶ ಮಾಡಿರೋ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಸಲ ಕಪ್ ನಮ್ದು ಆದ್ರೆ ಒಂಡೇ ಪಾನಿಪುರಿ ನಿಮ್ದು, ಮಸಾಲಾಪುರಿ, ಪಾನಿಪುರಿ, ಭೇಲ್ ಪುರಿ ಫ್ರೀ ಕೊಡುವುದಾಗಿ ಬರೆದುಕೊಂಡಿದ್ದಾರೆ. ಇದೇ ಜೂ.4 ರಂದು ಸಂಜೆ 5 ಗಂಟೆಯಿಂದ ಉಚಿತ ಚಾಟ್ಸ್ ನೀಡಲಿದ್ದಾರೆ.

