News Karnataka Kannada
Sunday, April 28 2024
ಬೆಂಗಳೂರು

ದಿವ್ಯಾಂಗರಿಗೆ ಉಚಿತ ಅಂಗಾಂಗ ಜೋಡಣೆ ಶಿಬಿರ

Free organ transplant camp for divyangs
Photo Credit : By Author

ಬೆಂಗಳೂರು: ಉದಯ್‌ ಪುರದ ದಿವ್ಯಾಂಗರ ರಾಷ್ಟ್ರಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್‌ ಸೇವಾ ಸಂಸ್ಥಾನ್‌ ನಿಂದ ಬೆಂಗಳೂರಿನಲ್ಲಿ ದಕ್ಷಿಣ ರಾಜ್ಯಗಳಿಂದ ಆಗಮಿಸಿದ್ದ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರಕ್ಕೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಚಾಲನೆ ನೀಡಿದರು.

ಬೆಂಗಳೂರಿನ ವಿವಿಪುರದ ಅರಸೋಜಿ ರಾವ್‌ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಆಂಧ್ರಪ್ರದೇಶದಿಂದ ಬಂದಿದ್ದ ದಿವ್ಯಾಂಗರಿಗೆ ಅಗತ್ಯಕ್ಕೆ ತಕ್ಕಂತೆ ಅಂಗಾಂಗಗಳ ಅಳತೆ ತೆಗೆದುಕೊಳ್ಳಲಾಯಿತು. ಅನುಭವಿ ಮೂಳೆ ತಜ್ಞರು, ಪ್ರಾಸ್ತೆಟಿಕ್ ಪರಿಣಿತ ವೈದ್ಯರು ಅಳತೆ ತೆಗೆದುಕೊಂಡರು. ದಿವ್ಯಾಂಗರ ಬದುಕಿನಲ್ಲಿ ಇದು ಹೊಸ ಆಶಾಕಿರಣ ಮೂಡಿಸುವ ಮತ್ತು ಸ್ವಾವಲಂಬಿ ಬದುಕು ಸಾಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸಚಿವರು ಪರಿಣಿತ ವೈದ್ಯರಿಂದ ಮಾಹಿತಿ ಪಡೆದರು.

ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಚಿವ ಬಿ. ನಾಗೇಂದ್ರ, ಜೀವನದಲ್ಲಿ ನಿರೀಕ್ಷೆ ಇಲ್ಲದೇ ಸಂಭವಿಸುವ ಅವಘಡದಲ್ಲಿ ಅಮೂಲ್ಯ ಅಂಗಾಂಗಳನ್ನು ಕಳೆದುಕೊಂಡು ಕಷ್ಟದಲ್ಲಿರುವವರಿಗೆ ಸರ್ಕಾರದ ಅರೋಗ್ಯ ಯೋಜನೆಗಳು ಸಹಕಾರಿಯಾಗಿವೆ. ಇದರ ಜೊತೆಗೆ ಇಂತಹ ಸೇವಾ ಸಂಸ್ಥೆಗಳ ಸಮಾಜ ಮುಖಿ ಸೇವೆಯಿಂದ ಆರ್ಥಿಕ ಹೊರೆ ಕಡಿಮೆಯಾಗಿದೆ. ನಾರಾಯಣ ಸೇವಾ ಸಂಸ್ಥೆ 38 ವರ್ಷಗಳಿಂದ 4.33 ಲಕ್ಷಕ್ಕೂ ಹೆಚ್ಚು ದಿವ್ಯಾಂಗರಿಗೆ ಶಸ್ತ್ರಚಿಕಿತ್ಸೆ ಮಾಡಿರುವುದು ಸಂಸ್ಥೆಯ ಅನುಪನ ಸೇವೆಗೆ ಸಾಕ್ಷಿಯಾಗಿದೆ. 38,200 ಅಂಗವಿಕಲ ಮಕ್ಕಳಿಗೆ, ಪುರುಷರು, ಮಹಿಳೆಯರಿಗೆ ಉಚಿತವಾಗಿ ಕೃತಕ ಅಂಗಾಗ ಜೋಡಣೆ ಮಾಡಿದ್ದು, ಈ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.

ಬಳ್ಳಾರಿ ಜಿಲ್ಲೆಯಿಂದ ಸಾಧ್ಯವಾದ ಎಲ್ಲಾ ನೆರವು ನೀಡುತ್ತೇವೆ. ನಮ್ಮ ಜಿಲ್ಲೆಯ ಕಂಪೆನಿಗಳು, ಕರ್ನಾಟಕಗಳಿಂದಲೂ ನೆರವು ನೀಡುತ್ತೇವೆ. ಸಂಸ್ಥೆಯ ಮುಖ್ಯಸ್ಥರಾದ ಕೈಶಾಲ್‌ ಮಾನವ್‌ ಜೀವಂತ ದೇವರು. ಇಂತಹ ಉದಾತ್ತ ಸಂಸ್ಥೆಗೆ ನಿವೇಶನ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನಿಸುತ್ತೇನೆ. ಸ್ವತಃ ತಮ್ಮ ಕಚೇರಿಯಲ್ಲೂ ಸಹ 8 ರಿಂದ 9 ಮಂದಿ ದಿವ್ಯಾಂಗರು ಕೆಲಸ ಮಾಡುತ್ತಿದ್ದಾರೆ. ಶನಿವಾರವಷ್ಟೇ ಬಳ್ಳಾರಿಯಲ್ಲಿ ನಾಲ್ಕು ಮಂದಿಗೆ ದಿವ್ಯಾಂಗರಿಗೆ ಕೆಲಸ ಕೊಡಿಸಿದ್ದೇನೆ. ತಮ್ಮ ಉಸಿರು ಇರುವ ತನಕ ದಿವ್ಯಾಂಗರ ಸೇವೆ ಮಾಡುತ್ತೇನೆ. ಕ್ರೀಡಾ ಮತ್ತು ಯುವ ಸಚಿವಾಲಯದಿಂದಲೂ ಇಂತಹ ಮಾನವೀಯ ಸೇವೆಗೆ ಸೂಕ್ತ ನೆರವು ನೀಡಲು ಸಿದ್ಧ ಎಂದರು.

ಕಾರ್ಯಕ್ರಮದಲ್ಲಿ ಜನರಲ್‌ ಮೋಟಾರ್ಸ್‌ ಕಂಪೆನಿಯ ಮುಖ್ಯಸ್ಥ ಅಮಿತ್‌ ಭಾತ್‌ ಪಟೇಲ್‌, ಉದ್ಯಮಿ ಗಣಪತ್‌ ಬಾಗ್ಲೇಚಾ, ನಾರಾಯಣ್‌ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್‌ ಪ್ರಸಾದ್‌ ಗೌರ್‌, ನಾರಾಯಣ್‌ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್‌ ಪ್ರಸಾದ್‌ ಗೌರ್‌, ಶಿಬಿರದ ಸಮನ್ವಯಕಾರ ರೋಹಿತ್‌ ತಿವಾರಿ, ಮಾಧ್ಯಮ ಸಮನ್ವಯಕಾರರಾದ ಬಿ.ವಿ ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು