ಬೆಂಗಳೂರು: ಹುಲಿಯೊಂದು ಒಂದೇ ಸಮಯದಲ್ಲಿ ದಾಳಿ ನಡೆಸಿ ನಾಲ್ವರು ಮಹಿಳೆಯರನ್ನು ಕೊಂದಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.

ತಡೋಬಾ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಸಿಂಧೇವಾಡಿ ತಾಲ್ಲೂಕಿನ ಗುಂಜೇವಾಹಿ–ಪಾಪನ್ಪುರ್ ಅರಣ್ಯ ವ್ಯಾಪ್ತಿಯಲ್ಲಿ ಈ ಭೀಕರ ಘಟನೆ ಗುರುವಾರ ನಡೆದಿದೆ. ಗುಂಜೇವಾಹಿ ಗ್ರಾಮದ ಹತ್ತು ಮಹಿಳೆಯರು ಕಟ್ಟಿಗೆ ಸಂಗ್ರಹಿಸಲು ಅರಣ್ಯಕ್ಕೆ ತೆರಳಿದ್ದರು.

ಈ ವೇಳೆ ಪೊದೆಯಲ್ಲಿ ಅಡಗಿದ್ದ ಹುಲಿ ದಾಳಿ ನಡೆಸಿದ್ದರಿಂದ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.