ಕರ್ನಾಟಕ ಆರೋಗ್ಯ ಇಲಾಖೆಯು ಬೆಂಗಳೂರಿನ ಹಲವು ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದು, 30ಕ್ಕೂ ಹೆಚ್ಚು ತಂಡಗಳು ಅಡುಗೆಮನೆ ಹಾಗೂ ಸಂಗ್ರಹಣಾ ಸ್ಥಳಗಳಲ್ಲಿನ ನೈರ್ಮಲ್ಯದ ಗುಣಮಟ್ಟವನ್ನು ಪರಿಶೀಲಿಸುತ್ತಿವೆ.
ಆಹಾರ ಸುರಕ್ಷತಾ ಇಲಾಖೆ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಸಚಿವ ಯು ಟಿ ಖಾದರ್ ಸೂಚನೆ ಮೇರೆಗೆ ಇಲಾಖೆ ಅಲರ್ಟ್ ಆಗಿದ್ದು, ತ್ರಿ ಸ್ಟಾರ್, ಫೈವ್ ಸ್ಟಾರ್ ಹೋಟೆಲ್ ಗಳ ಮೇಲೆ ದಾಳಿ ಮಾಡಿದ್ದಾರೆ.
ಬೆಂಗಳೂರಿನ ಅಶೋಕ ಹೋಟೆಲ್ ಮತ್ತು ಶಾಂಘ್ರೀಲಾ ಹೋಟೆಲ್ ಸೇರಿ ಹಲವು ಹೋಟೆಲ್ಗ ಮೇಲೆ ದಾಳಿ ನಡೆಸಲಾಗಿದೆ. ನಗರದ ಹಲವೆಡೆ 30 ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ ನಡೆದಿದ್ದು, ಈ ವೇಳೆ ಹಲವು ಅವಧಿ ಮೀರಿದ ಆಹಾರ ಪತ್ತೆಯಾಗಿದೆ.

