News Karnataka Kannada
Sunday, May 12 2024
ಬೆಂಗಳೂರು

ಹೊಸ ಪಡಿತರ ಕಾರ್ಡ್​​ ವಿತರಣೆಗೆ ಆಹಾರ ಇಲಾಖೆ ಗ್ರೀನ್ ಸಿಗ್ನಲ್

Padithra
Photo Credit : News Kannada

ಬೆಂಗಳೂರು: ಪಡಿತರದಾರಿಗೆ ಆಹಾರ ಇಲಾಖೆಯಿಂದ ಸಿಹಿ ಸುದ್ದಿ ನೀಡಿದೆ. ಬಾಕಿ ಉಳಿದಿದ್ದ ಪಡಿತರ ಕಾರ್ಡ್​​​ಗಳನ್ನು ನ.03ರ ಇಂದಿನಿಂದ ನವೆಂಬರ್​ 20ನೇ ತಾರೀಖಿನವರೆಗೂ ವಿತರಿಸಲಾಗುತ್ತದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2.96 ಲಕ್ಷ ಪಡಿತರ ಕಾರ್ಡ್​​ಗಳು ವಿತರಣೆಗೆ ಬಾಕಿ ಉಳಿದಿದ್ದವು. ಈ ಕಾರ್ಡ್​ಗಳನ್ನು ಸದ್ಯ ಪರಿಶೀಲಿಸಲಾಗಿದ್ದು 2.96 ಲಕ್ಷ ಕಾರ್ಡ್​​ಗಳ ಪೈಕಿ 2.78 ಕಾರ್ಡ್​ಗಳ ಪರಿಶೀಲನೆ ನಡೆದಿದೆ. ದಾಖಲೆಗಳು ಸರಿ ಇಲ್ಲದ ಕಾರಣ 50 ಸಾವಿರ ಕಾರ್ಡ್​ಗಳನ್ನ ರದ್ದುಪಡಿಸಲಾಗಿದೆ. ಸದ್ಯ 2 ಲಕ್ಷದ 28 ಸಾವಿರ ಕಾರ್ಡ್​ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಈ ಕಾರ್ಡ್​ಗಳನ್ನು ಆಹಾರ ಇಲಾಖೆ ಇಂದಿನಿಂದ ವಿತರಿಸುತ್ತಿದೆ.

ಪಡಿತರ ಕಾರ್ಡ್​ದಾರರಿಗೆ ಆಹಾರ ಇಲಾಖೆಯಿಂದ ಸಂದೇಶ ರವಾನಿಸಲಾಗಿದ್ದು, ಒಟಿಪಿ ನಂಬರ್ ಪಡೆದು ತಾವೇ ಗೂಗಲ್​ನಲ್ಲಿ ಕಾರ್ಡ್​ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಅಪ್ರುವಲ್​ಗೆ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಪ್ರಕಟಣೆ ಹೊರಡಿಸಿದೆ.

ಪಡಿತರ ಪಡೆಯದವರ ಬಿಪಿಎಲ್ ಕಾರ್ಡ್​​ ಅನ್ನು ರದ್ದುಪಡಿಸುವುದಿಲ್ಲ, ಬದಲಾಗಿ ಆರೋಗ್ಯ ಯೋಜನೆಗಳಿಗೆ ಕಾರ್ಡ್​ಗಳನ್ನು ಬಳಸಲು ಅವಕಾಶವಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು