ಬೆಂಗಳೂರು: ಬೆಂಗಳೂರು ನಗರವಾಸಿಗಳು ಗೌರಿ ಗಣೇಶ ಹಬ್ಬ ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾದ್ರಪದ ಶುಕ್ಲ ಚೌತಿಯಂದು ಬರುವ ಗೌರಿ-ಗಣೇಶನನ್ನ ಸ್ವಾಗತಿಸಲು ಸಿಟಿ ಮಂದಿ ಸಜ್ಜಾಗಿದ್ದಾರೆ. ಇತ್ತ ಪ್ರತಿ ಬಾರಿಯಂತೆ ಈ ಸಲ ಕೂಡ ಹೂ, ಹಣ್ಣುಗಳ ಬೆಲೆ ಕೊಂಚ ಏರಿಕೆಯಾಗಿದೆ. ಇದು ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಬಿಸಿ ಮುಟ್ಟಿಸಿತ್ತು.

ಕನಕಾಂಬರ ಕೆಜಿಗೆ – 3000 ರೂ. ಮಲ್ಲಿಗೆ – ಕೆಜಿಗೆ 600 ರೂ. ಗುಲಾಬಿ- ಕೆಜಿಗೆ 250 ರೂ. ಸೇವಂತಿಗೆ – ಕೆಜಿಗೆ 180 ರೂ. ಸುಗಂಧರಾಜ-ಕೆಜಿಗೆ 240 ರೂ.

ಸೇಬು- ಕೆಜಿಗೆ 120 ರಿಂದ 200ರೂ. ದಾಳಿಂಬೆ- ಕೆಜಿಗೆ 160 ರೂ. ಏಲಕ್ಕಿ ಬಾಳೆ – ಕೆಜಿಗೆ 120 ರೂ. ಸೀತಾಫಲ- ಕೆಜಿಗೆ 100 ರೂ. ಸಪೋಟ- ಕೆಜಿಗೆ 100 ರೂ. ದ್ರಾಕ್ಷಿ- ಕೆಜಿಗೆ 120- 200 ರೂ. ಅನಾನಸ್- ಎರಡಕ್ಕೆ 100-120 ರೂ. ಇನ್ನು ಬಾಳೆಕಂದು- ಜೋಡಿಗೆ 60 ರೂ. ಮಾವಿನ ತೋರಣ- 20 ರೂ. ಗರಿಕೆ-ಕಟ್ಟಿಗೆ 30 ರೂ.
ಬಿಲ್ವಪತ್ರೆ- 20ರೂ. ಎಕ್ಕದಹಾರ- 50 ರಿಂದ 60 ರೂ. ಇದೆ.