Bengaluru 22°C
Ad

ಬೆಂಗಳೂರು-ಅಬುಧಾಬಿಗೆ ಆಗಸ್ಟ್​ 1ರಿಂದ ಇಂಡಿಗೋ ನೇರ ವಿಮಾನ ಸಂಚಾರ

ಇದೀಗ ಪ್ರಯಾಣಿಕರಿಗೆ ಇಂಡಿಗೋ ಸಿಹಿ ಸುದ್ದಿ ನೀಡಿದೆ.ಬೆಂಗಳೂರು ಹಾಗೂ ಅಬುಧಾಬಿ ಮಧ್ಯೆ ಆಗಸ್ಟ್ 1ರಿಂದ ನೇರ ವಿಮಾನ ಸೇವೆ ಆರಂಭಿಸುವುದಾಗಿ ಇಂಡಿಗೋ ಏರ್​ಲೈನ್ಸ್ ತಿಳಿಸಿದೆ. ವಾರದಲ್ಲಿ ಆರು ಬಾರಿ ಬೆಂಗಳೂರು ಅಬುಧಾಬಿ ವಿಮಾನಗಳು ಕಾರ್ಯನಿರ್ವಹಿಸಲಿವೆ.

ಬೆಂಗಳೂರು : ಇದೀಗ ಪ್ರಯಾಣಿಕರಿಗೆ ಇಂಡಿಗೋ ಸಿಹಿ ಸುದ್ದಿ ನೀಡಿದೆ.ಬೆಂಗಳೂರು ಹಾಗೂ ಅಬುಧಾಬಿ ಮಧ್ಯೆ ಆಗಸ್ಟ್ 1ರಿಂದ ನೇರ ವಿಮಾನ ಸೇವೆ ಆರಂಭಿಸುವುದಾಗಿ ಇಂಡಿಗೋ ಏರ್​ಲೈನ್ಸ್ ತಿಳಿಸಿದೆ. ವಾರದಲ್ಲಿ ಆರು ಬಾರಿ ಬೆಂಗಳೂರು ಅಬುಧಾಬಿ ವಿಮಾನಗಳು ಕಾರ್ಯನಿರ್ವಹಿಸಲಿವೆ. ಇದರೊಂದಿಗೆ ಭಾರತದ ವಿವಿಧ ನಗರಗಳಿಂದ ಅಬುಧಾಬಿಗೆ ತೆರಳುವ ಇಂಡಿಗೋ ವಿಮಾನಗಳ ಸಂಖ್ಯೆ 75 ಕ್ಕೆ ತಲುಪಿದೆ. ಹೊಸ ವಿಮಾನ ಸೇವೆಯು ಯುನೈಟೆಡ್ ಅರಬ್ ಎಮಿರೇಟ್ಸ್‌ ರಾಜಧಾನಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಇಂಡಿಗೋ ತಿಳಿಸಿದೆ.

Ad
300x250 2

ಬೆಂಗಳೂರು ಅಬುಧಾಬಿ ಇಂಡಿಗೋ ವಿಮಾನ ವೇಳಾಪಟ್ಟಿ
ಇಂಡಿಗೋ ವಿಮಾನ ಸಂಖ್ಯೆ 6E 1438 ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ರಾತ್ರಿ 9.25 ಕ್ಕೆ ಹೊರಟು ರಾತ್ರಿ 11.30 ಕ್ಕೆ ಅಬುಧಾಬಿ ತಲುಪಲಿದೆ. ಅಬುಧಾಬಿಯಿಂದ, ವಿಮಾನ ಸಂಖ್ಯೆ 6E 1439 ಬುಧವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ (ಆಗಸ್ಟ್ 2 ರಿಂದ) 12.30 ಕ್ಕೆ ಹೊರಟು ಬೆಳಗ್ಗೆ 5.45ಕ್ಕೆ ವಿಮಾನ ಬೆಂಗಳೂರು ತಲುಪಲಿದೆ.

Ad
Ad
Nk Channel Final 21 09 2023
Ad