ಬೆಂಗಳೂರು: ನಗರದ ಕೃಷ್ಣರಾಜ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಬೆಂಕಿ ಅವಘಡ ಸಂಭವಿಸಿದೆ.
ಕಸದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಇಡೀ ಮಾರುಕಟ್ಟೆಯನ್ನು ದಟ್ಟ ಹೊಗೆ ಆವರಿಸಿದೆ. ಕೆ.ಆರ್. ಮಾರುಕಟ್ಟೆ ಫ್ಲೈ ಓವರ್ ಬಳಿಯೂ ದಟ್ಟ ಹೊಗೆ ಆವರಿಸಿದ್ದು , ಜನರು ಆತಂಕಗೊಳಗಾಗಿದ್ದಾರೆ.
ಬೆಂಕಿ ಅವಘಡದಲ್ಲಿ ಸುದೈವವಶಾತ್ ಯಾವುದೇ ಹಾನಿ ಅಥವಾ ನೋವುಗಳು ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

