ಬೆಂಗಳೂರು: ಹಾಸ್ಯ ನಟ ‘ಹುಲಿ’ ಕಾರ್ತಿಕ್ ಅವರು ಇತ್ತೀಚೆಗಷ್ಟೇ ‘ಗಿಚ್ಚಿ ಗಿಲಿಗಿಲಿ’ ಮೂರನೇ ಸೀಸನ್ನ ವಿನ್ ಆಗಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚತ್ತು. ಇತ್ತೀಚೆಗೆ ರಿಲೀಸ್ ಆದ ‘ಪೌಡರ್’ ಸೇರಿ ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆಗುತ್ತಾರೆ ಎಂದು ವರದಿ ಆಗಿತ್ತು. ಆದರೆ, ಹಾಗಾಗಿಲ್ಲ. ಈಗ ಅವರು ಮಾತನಾಡುವಾಗ ಎಡವಿದ್ದಾರೆ. ಈ ಕಾರಣಕ್ಕೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಒಂದು ಸಮುದಾಯವನ್ನ ಹೀಗಳೆಯುವ ರೀತಿಯಲ್ಲಿ ಹುಲಿ ಕಾರ್ತಿಕ್ ಮಾತನಾಡಿದ್ದರು. ಒಂದು ನಿರ್ದಿಷ್ಟ ಸಮುದಾಯದ ಹೆಸರನ್ನು ನೆಗೆಟಿವ್ ಆಗಿ ಬಳಸಿದ್ದರು. ಈ ಕಾರಣದಿಂದಲೇ ಹುಲಿ ಕಾರ್ತಿಕ್ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಲಾಗಿದೆ.

