ರೈತರ ಕೃಷಿ ಕ್ಷೇತ್ರ ಸಮಸ್ಯೆ: ಸರಣಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು: ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಮತ್ತು ಕೃಷಿ ಇಲಾಖೆ, ಕರ್ನಾಟಕ ಸರ್ಕಾರದವರು ಜಂಟಿಯಾಗಿ ಆಯೋಜಿಸುತ್ತಿರುವ “ರೈತರ ಕೃಷಿ ಕ್ಷೇತ್ರ ಸಮಸ್ಯೆಗಳು ಮತ್ತು ಪರಿಹಾರ” ಎಂಬ ವಿನೂತನ ರಾಜ್ಯ ಮಟ್ಟದ ಆನ್‍ಲೈನ್ ಸರಣಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ತೊಗರಿ ಸೊರಗು ರೋಗದ ಸಮಗ್ರ ನಿರ್ವಹಣೆ ಕುರಿತು ಡಾ.ಬಿ.ಜಹೀರ್ ಅಹಮ್ಮದ್, ಸಸ್ಯ ರೋಗ ತಜ್ಞರು, ಕೃಷಿ ವಿಜ್ಞಾನ ಕೇಂದ್ರ, ಗುಲ್ಬರ್ಗಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತೊಗರಿ ಬೆಳೆಗಾರರು ಬೇಸಿಗೆಯಲ್ಲಿ ಆಳವಾದ ಉಳುಮೆ, ಮಣ್ಣು ಪರೀಕ್ಷೆ ಆಧಾರದ ಮೇಲೆ ಸೂಕ್ತ ಪೋಷಕಾಂಶ ಒದಗಿಸುವುದು, ಬೆಳೆ ಪರಿವರ್ತನೆ, ಟ್ರೈಕೋಡರ್ಮಾಮಿಶ್ರಿತ ಬೇವಿನ ಹಿಂಡಿ, ಎರೆಹುಳುಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ಬಳಸುವುದು, ಶಿಫಾರಸ್ಸಿನ ತಳಿಗಳನ್ನು ಬಳಸುವುದು, ಹೊಲಗಳಲ್ಲಿ ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸುವುದು, ಟ್ರೈಕೋಡರ್ಮಾಜೈವಿಕ ಶೀಲಿಂದ್ರ ನಾಶಕದಿಂದ ಬೀಜೋಪಚಾರ, ಸೊರಗು ರೋಗ ಕಂಡು ಬಂದಲ್ಲಿ ಆರಂಭಿಕ ಹಂತದಲ್ಲಿ 5 ಗ್ರಾಂಟ್ರೈಕೋಡರ್ಮಾ ಅಥವಾ ಕಾರ್ಬನ್‍ಡೈಜಿಂ ಮತ್ತು ಮ್ಯಾಂಕೋಜೆಬ್ ಸಂಯುಕ್ತ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ನೆನೆಯುವಂತೆ ಸಿಂಪಡಿಸುವ ಮೂಲಕ ತೊಗರಿಯಲ್ಲಿ ಸೊರಗು ರೋಗವನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

ಆನ್‍ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು, ಡಾ.ಕೆ.ಶಿವರಾಮು,ಸಂಯೋಜಕರು ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು. ಎಂ.ಗೋಪಾಲ್ ಸಂಯೋಜಕರು ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಮತ್ತು ಎನ್. ಬಸವರಾಜು, ರಾಜ್ಯ ಸಂಯೋಜಕರು (ಆತ್ಮ), ಬೆಂಗಳೂರು ಇವರು ಭಾಗವಹಿಸಿದ್ದರು.

Ashika S

Recent Posts

ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಚಿಕನ್​​ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ಚಿಕನ್ ಶವರ್ಮಾ…

21 mins ago

ಮೇ 11ರಿಂದ 13ರವರೆಗೆ ವಾಮಂಜೂರಿನಲ್ಲಿ ಕೃಷಿ ಮೇಳ, ದಶಮ ಸಂಭ್ರಮ

ಇದೇ ಮೇ 11ರಿಂದ 13ರವರೆಗೆ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಜರುಗಲಿದೆ ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ…

23 mins ago

ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂನಿಂದ ವಾಟ್ಸಾಪ್ ನಂಬರ್ ಬಿಡುಗಡೆ

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು…

37 mins ago

ಎಸ್‌ಎಸ್‌ಎಲ್‌ಸಿ 2,3ನೇ ಪರೀಕ್ಷೆ ಬರೆಯುವವರಿಗೆ ಸ್ಪೆಷಲ್‌ ಕ್ಲಾಸ್‌ ಯೋಜನೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

40 mins ago

ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ ಪ್ರಭು ಚವಾಣ್

ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ…

54 mins ago

ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ ಕೇಸ್‌ : ಇಬ್ಬರ ಬಂಧನ

ಶಾಸಕ ಇಕ್ಬಾಲ್‌ ಹಸೇನ್‌ ಅವರು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್‌ ಮಾಡಿದ್ದ ಆರೋಪದಡಿ…

56 mins ago