ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆ 7,145 ಕೋಟಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ 3,977 ಕೋಟಿ, ಆಹಾರ ಮತ್ತು ನಾಗರೀಕ ಸರಬರಾಜು 8275, ಬೆಂಗಳೂರು ಅನುದಾನಕ್ಕೆ 7 ಸಾವಿರ ಕೋಟಿ, ಬೆಂಗಳೂರು ಟನಲ್ ಯೋಜನೆಗೆ 40 ಸಾವಿರ ಕೋಟಿ, ಲೋಕೋಪಯೋಗಿ ಇಲಾಖೆಗೆ 11841, ಶಿಕ್ಷಣಕ್ಕೆ 45,286ಸಾವಿರ ಕೋಟಿ: ಸರ್ಕಾರಿ ಪ್ರೌಢ ಶಾಲಾ ಅತಿಥಿ ಶಿಕ್ಷಕರ ಪ್ರೋತ್ಸಾಹ ದನ ಏರಿಕೆ: ಎರಡು ಸಾವಿರ ರೂ ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಬಜೆಟ್ ಘೋಷಿಸಿದ್ದಾರೆ.
ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ: 1,500 ಕೋಟಿ ಮೀಸಲು, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ: 2 ಕೋಟಿ ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ, 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ: 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 50 ಪ್ರೌಢ ಶಾಲೆಗಳ ಉನ್ನತೀಕರಣ.
ಮಹಿಳಾ ಉದ್ದೇಶಿಕ ಕಾರ್ಯಕ್ರಮಗಳಿಗೆ 90 ಸಾವಿರ ಕೋಟಿ, SEP-TSP ಗೆ 42,018 ಸಾವಿರ ಕೋಟಿ, ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ಪ್ರೋತ್ಸಾಹ ಧನ ಹೆಚ್ಚಳ, ವೃಷಭಾತಿ ಯೋಜನೆಗೆ ವ್ಯಾಲಿ ಯೋಜನೆಗೆ 1080 ಸಾವಿರ ಕೋಟಿ, ಎತ್ತಿಹೊಳೆ ಯೋಜನೆಗೆ 533 ಕೋಟಿ.
ಗ್ಯಾರಂಟಿ ಯೋಜನೆ: 54,391 ಸಾವಿರ ಕೋಟಿ, ಮಲ್ಟಿಫ್ಲೆಕ್ಸ್‌ಗಳಲ್ಲಿ ಏಕರೂಪ ಟಿಕೆಟ್ ದರ ನಿಗದಿ: ಚಿತ್ರಗಳಿಗೆ 200 ದರ, ರಸ್ತೆ ಮತ್ತು ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ (ನೂತನ ಸ್ಕೀಂ): 8 ಸಾವಿರ ಕೋಟಿ,
ತೋಟಗಾರಿಕಾ ಅಭಿವೃದ್ಧಿ ಯೋಜನೆಗೆ 2.95 ಕೋಟಿ ಅನುದಾನ, 20 ಜಿಐ ಟ್ಯಾಗ್ ಬಿಸಿ ತಳಿಗಳ ಬೀಜ ಸಂರಕ್ಷಣೆಗೆ ಒತ್ತು, ಹೂ ಕೃಷಿ, ಅಲಂಕಾರಿಕ ಮತ್ತು ಔಷಧಿ ಸಸ್ಯಗಳ ಬೆಳವಣಿಗೆಗೆ ಒತ್ತು. 426 ಕೋಟಿ ಸಹಾಯ ಧನ. ಎಲೆಚುಕ್ಕಿ ರೋಗ: ಅಡಿಕೆ ಬೆಳೆಗಾರಿಗೆ 62ಕೋಟಿ, ತೆಂಗು: ಸಸ್ಯ ಸಂರಕ್ಷಣಾ ಕ್ರಮ.
ರೇಷ್ಮೆ: ಕಚ್ಚಾ ರೇಷ್ಮೆ ಬೇಇಡಿಕೆ 120ಕೊನೆಗಳ ಸ್ವಯಂ ಚಾಲಿಕ ವ್ಹೀಲಿಂಗ್ ರಾಮನಗರ ಸೇರಿದಂತೆ ಹಲವು ರೇಷ್ಮೆ ಕಾರ್ಖಾನೆಗಳ ಅಭಿವೃದ್ಧಿಗೆ 250 ಕೋಟಿ ವೆಚ್ಚದಲ್ಲಿ ಅನುಷ್ಠಾನ. ಮೈಸೂರಲ್ಲಿ ರೇಷ್ಮೇ ಗೂಡು ನಬಾರ್ಡ್ ಅಡಿಯಲ್ಲಿ ನಿರ್ಮಾಣಕ್ಕೆ 55 ಕೋಟಿ ಅನುದಾನ.
ಪಶು ಸಂಗೋಪನೆ: ಜಾನುವಾರು ಅನುಗ್ರಹ ಯೋಜನೆ ಹಸು, ಎಮ್ಮೆ, ಕೋಣ ಅನುದಾನ 10 ಸಾವಿರ ರೂ, ನಿಂದ 15 ಸಾವಿರ ರೂ.ಗೆ ಏರಿಕೆ. ಕುರಿ ಆಡು 5 ಸಾವಿರ ರೂ. ನಿಂದ 7.5 ಸಾವಿರ ರೂ.ಗೆ ಏರಿಕೆ. 50 ನೂತನ ಪಶು ಚಿಕಿತ್ಸಾಲಯ ನಿರ್ಮಾಣ, 100 ಪಶು ವೈದ್ಯಕೀಯ ಸಂಸ್ಥೆಗಳ ನಿರ್ಮಾಣ (ನಬಾರ್ಡ್ ಸಹಾಯ),
ಹಳ್ಳೀಕಾರ್ ಕಿಲಾರಿ, ಅಮೃತ್ ಮಹಾಲ್, ಬನ್ನೂರು ಕುರಿ ಉನ್ನತೀಕರಣಕ್ಕೆ 2 ಕೋಟಿ ಅನುದಾನ, ಮೀನುಗಾರಿಕೆ: ಮಂಗಳೂರು ಭಾಗದಲ್ಲಿ ನಬಾರ್ಡ್‌ನೋದಿಗೆ ಅಬಿವೃದ್ಧಿಗೆ 30ಕೋಟಿ. ಮೈಸೂರಲ್ಲಿ ಹೈಟೆಕ್ ಮತ್ಯ ದರ್ಶೀನಿ, ಆಳ ಸಮುದ್ರ ಮೀನುಗಾರಿಕೆ ಉತ್ತೇಜನ.
ಸಹಕಾರ:
37 ಲಕ್ಷ ರೈತರಿಗೆ 28 ಸಾವಿರ ಕೋಟಿ ಸಾಲ, 247 ಕೋಟಿ ಬಡ್ಡಿ ಮನ್ನಾ. ಪ್ರಾಥಮಿಕ ಕೃಷಿಪತ್ತಿನ ಸಹಕಾರ 3000 ಸಾವಿರ ಸಂಘಗಳ ಗಣಕೀಕೃತ, ಕನಿಷ್ಠ ಬೆಂಬಲ ಬೆಲೆ: ತೊಗರಿಗೆ ಮನ್ನಣೆ ಕ್ವಿಂಟಾಲ್‌ಗೆ 3550 ರೂ. ನಂತೆ ಸರ್ಕಾರ ಅನುದಾನ 450 ರೂ. ಸೇರಿದಂತೆ 138 ಕೋಟಿ ಬಿಡುಗಡೆ.
ಠೇವಣಿದಾರರಿಗೆ ಸಹಾಯವಾಣಿ ಸ್ಥಾಪನೆ ಮತ್ತು ಡಿಜಿಟಲೀಕರಣ 376 ಕೋಟಿ ಘೋಷಣೆ. ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಶ್ರಮಿಕರು ಮರಣ ಹೊಂದಿದವರಿಗೆ 1 ಲಕ್ಷ 5 ಲಕ್ಷ. ಬೆಂಗಳೂರಲ್ಲಿ ಸ್ಯಾಟಲೈಟ್ ಮಾರುಕಟ್ಟೆ ನಿರ್ಮಾಣ, ಕಲ್ಯಾಣ ಕರ್ನಾಕಟದಲ್ಲಿ ಹೈನುಗಾರಿಕೆ ಹೆಚ್ಚಳಕ್ಕೆ 10 ಕೋಟಿ, ನೂತನ ಕಲ್ಬುರ್ಗಿ ಮೆಗಾ ಡೈರಿ 50 ಕೋಟಿ.
ಜಲ ಸಂಪನ್ಮೂಲ
ನೀರಾವರಿ ಯೋಜನೆ ಸುಧಾರಣೆ; ಕರ್ನಾಟಕ ನೀರಾವರಿ ವಿಧೇಯಕದಡಿ ವಿಶೇಷ ಯೋಜನೆಗಳು, ಎತ್ತಿನಹೊಳೆ ಯೋಜನೆಗೆ, ಭ್ರದ ಮೇಲ್ದಂಡೆ ಯೋಜನೆ ರಾಜ್ಯ ಸರ್ಕಾರದಿಂದ ವಿಶೇಷ ಯೋಜನೆ , ರಾಜ್ಯ ಸರ್ಕಾರ ತರೀಕೆರೆ ಏತ ನೀರಾವರಿ ಯೋಜನೆಗೆ ಉತ್ತೇಜನೆ,
ಮೇಕೆದಾಟು ಯೋಜನೆ: ಕೇಂದ್ರ ಸಕ್ಷಮಾ ಪ್ರಾಧಿಕಾರದ ಅನುಮತಿ ಪಡೆದು ಕಾರ್ಯ ಆರಂಭ, ಕೃಷ್ಣ, ಕಾವೇರಿ ಕಣಿವೆ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳು ಈ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಅಣೆಕಟ್ಟು ಗೇಟುಗಳ ದುಸ್ತಿರಕ್ಕೆ ಕ್ರಮ, ಸಣ್ಣ ನೀರಾವರಿ: ಅಂತರ್ಜಲ ಹೆಚ್ಚಳಕ್ಕೆ 533 ಕೋಟಿ ಅನುದಾನ.

