ಬೆಂಗಳೂರು: ಆಫ್ರಿಕಾದ ಹಲವು ಭಾಗಗಳಲ್ಲಿ ಎಬೋಲಾ ವೈರಸ್‌ ಹಾವಳಿ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಕಟ್ಟೆಚ್ಚರಕ್ಕೆ ಆದೇಶ ನೀಡಲಾಗಿದೆ.

ದೆಹಲಿಯಲ್ಲಿ ನಡೆಯಬೇಕಾಗಿದ್ದ ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನೂ ಮುಂದೂಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಶೃಂಗಸಭೆಯನ್ನು ಮುಂದೂಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ರಾಜ್ಯ ಆರೋಗ್ಯ ಇಲಾಖೆಗೆ ಏನು ಸೂಚನೆ?

  1. ಕ್ವಾರಂಟೈನ್ ಸೆಂಟರ್ ಗುರುತು ಮಾಡಿ
  2. ಐಸೂಲೇಷನ್ ಸೌಲಭ್ಯ ಇರುವ ಕ್ವಾರಂಟೈನ್ ಸೆಂಟರ್
  3. ಹೆಲ್ತ್ ಸ್ಕ್ರೀನಿಂಗ್ ಗೆ ಸಿಬ್ಬಂದಿಯನ್ನ ಹೆಚ್ಚಳ ಮಾಡಿಕೊಳ್ಳಿ
  4. ಶಂಕಿತ ಕೇಸ್ ಗಳಿದ್ದರೆ ಆಸ್ಪತ್ರೆಗೆ ರವಾನಿಸಲು ಅಂಬುಲೆನ್ಸ್‌ ನಿಯೋಜಿಸಿ
  5. ಎಬೋಲಾ ಚಿಕಿತ್ಸೆ ಬಗ್ಗೆ ಹೆಲ್ತ್ ವರ್ಕರ್ಸ್ ಅರಿವು ಮೂಡಿಸುವಂತೆ ಸೂಚನೆ

ಎಬೋಲಾ ನಿಯಂತ್ರಣಕ್ಕೆ ಏರ್‌ಪೋರ್‌ಟ್‌ಗಳಿಗೆ ಮಾರ್ಗಸೂಚಿ ಪ್ರಕಟ

  1. ತ್ರಿಬಲ್‌ ಲೇಯರ್‌ ಮಾಸ್ಕ್ ಕಡ್ಡಾಯ
  2. ಹ್ಯಾಂಡ್ ಗ್ಲೌಸ್ ಹಾಕಬೇಕು
  3. ಸ್ಯಾನಿಟೇಸರ್ ಅನ್ನು ಇಟ್ಟಿಕೊಳ್ಳಬೇಕು
  4. ಎಬೋಲಾ ಶಂಕಿತ ಕೇಸ್ ಪತ್ತೆ ಆದರೆಕೂಡಲೇ ರಿಪೋರ್ಟ್ ಮಾಡಬೇಕು
  5. ಪ್ರಯಾಣಿಕರ ಟ್ರಾವೆಲ್ ಹಿಸ್ಟರಿ ದಾಖಲು ಮಾಡಿಕೊಳ್ಳಬೇಕು
  6. ಸೆಲ್ಪ್ ಡಿಕ್ಲರೇಷನ್ ಫಾರ್ಮ್ ಬರೆದುಕೊಡಬೇಕು
  7. ಎಬೋಲಾ ಬಾಧಿತ ದೇಶಗಳಿಂದ ಬಂದರ ಡಿಟೇಲ್ಸ್ ಜೊತೆಗೆ ಸೆಲ್ಪ್ ಡಿಕ್ಲರೇ ಕಡ್ಡಾಯ

ಎಬೋಲಾ ಬಂದ ವ್ಯಕ್ತಿಗೆ ಐಸೂಲೇಷನ್ ಹೇಗೆ?

  1. ಪ್ರತ್ಯೇಕ ಕೊಠಡಿಯಲ್ಲಿ ಐಸೂಲೇಟ್ ಮಾಡಬೇಕು
  2. ಬಾತ್ ರೂಮ್ ಇರುವ ಕೊಠಡಿಯಲ್ಲಿ ಐಸೂಲೇಟ್ ಮಾಡಬೇಕು
  3. ಕೊಠಡಿ ಪ್ರವೇಶಕ್ಕೆ ಪಿಪಿಇ ಕಿಟ್ ಕಡ್ಡಾಯವಾಗಿ ಧರಿಸಬೇಕು
  4. ಪ್ರತಿ 2 ಗಂಟೆಗೆ ಒಮ್ಮೆ ಆಕ್ಸಿಜನ್ ರಕ್ತದ ಆಮ್ಲಜನಕ ಪರೀಕ್ಷಿಸಬೇಕು
  5. 2 ಗಂಟೆಗೆ ಒಮ್ಮೆ ಕಾರ್ಡಿಯಾಕ್ ಟೆಸ್ಟ್ ಆಗಬೇಕು