ಬೆಂಗಳೂರು: 14ನೇ ರಾಷ್ಟ್ರೀಯ ಡ್ರಾಗನ್ ಬೋಟ್ ಚಾಂಪಿಯನ್ಶಿಪ್ (ಸೀನಿಯರ್ ಪುರುಷರು & ಮಹಿಳೆಯರು, ಜೂನಿಯರ್ ಹುಡುಗರು & ಹುಡುಗಿಯರು) 6 ರಿಂದ 9 ಜನವರಿ 2026 ರ ವರೆಗೆ ಭೋಪಾಲ್, ಮಧ್ಯಪ್ರದೇಶ ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಚಾಂಪಿಯನ್ಶಿಪ್ನಲ್ಲಿ ಒಟ್ಟು 106 ರೇಸ್ಗಳು ಯಶಸ್ವಿಯಾಗಿ ಪೂರ್ಣಗೊಂಡು, 17 ರಾಜ್ಯಗಳು, ಸುಮಾರು 1150 ಆಟಗಾರರು ಮತ್ತು ಸುತ್ತಮುತ್ತ 200 ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕ ತಂಡ ತನ್ನ ಶ್ರಮ, ಆಯ್ಕೆಯುಳ್ಳ ತಂತ್ರ ಮತ್ತು ತಂಡದ ಸಹಕಾರದೊಂದಿಗೆ ಒಳ್ಳೆಯ ಪ್ರದರ್ಶನ ನೀಡಿದೆ.
ಒಟ್ಟು 11 ಪದಕ
2000 ಮೀಟರ್ಗಳು
D10 ಪುರುಷರು – ಬೆಳ್ಳಿ
D20 ಪುರುಷರು – ಬೆಳ್ಳಿ
D20 ಮಿಶ್ರಿತ – ಬೆಳ್ಳಿ
500 ಮೀಟರ್ಗಳು
D10 ಮಿಶ್ರಿತ – ಚಿನ್ನ
D10 ಪುರುಷರು – ಚಿನ್ನ
D20 ಪುರುಷರು – ಬೆಳ್ಳಿ
D20 ಮಿಶ್ರಿತ – ಬೆಳ್ಳಿ
200 ಮೀಟರ್ಗಳು
D10 ಪುರುಷರು – ಚಿನ್ನ
D10 ಮಿಶ್ರಿತ – ಬೆಳ್ಳಿ
D20 ಮಿಶ್ರಿತ – ಬೆಳ್ಳಿ
D20 ಪುರುಷರು – ಬೆಳ್ಳಿ
ಒಟ್ಟು ಪದಕಗಳು
ಚಿನ್ನ – 3
ಬೆಳ್ಳಿ – 7
ಕಂಚು – 1
ಈ ಸಾಧನೆ ಆಟಗಾರರ ಪರಿಶ್ರಮ ಮತ್ತು ಶ್ರೀ ಮಹೇಶ್ ಎಂ.ಎಸ್. ಶ್ರೀ ವಿಜಯ್ ಕುಮಾರ್. ಶ್ರೀ ವೀರಮುತ್ತು ತರಬೇತುದಾರರ ಮಾರ್ಗದರ್ಶನದಿಂದ ಸಾಧ್ಯವಾಗಿದೆ.

