ಬೆಂಗಳೂರು: ಹೈಕಮಾಂಡ್ ನಿರ್ಧಾರವನ್ನು ನಾನು, ಡಿಕೆ ಶಿವಕುಮಾರ್ ಇಬ್ಬರೂ ಪಾಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಸಿಎಂ ಬದಲಾವಣೆ ವಿಚಾರ ಎಐಸಿಸಿ, ಒಬಿಸಿ ಸಲಹಾ ಮಂಡಳಿ ಸಭೆಯ ಸುದ್ದಿಗೋಷ್ಟಿ ಸಂದರ್ಭದಲ್ಲಿ ಮತ್ತೆ ಸದ್ದು ಮಾಡಿದೆ. ಒಬಿಸಿ ನಾಯಕ ಇರುವ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗುತ್ತಾ? ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಎಐಸಿಸಿ ಒಬಿಸಿ ಅಧ್ಯಕ್ಷ ಅನಿಲ್ ಜೈ ಹಿಂದ್ ಅವರು ತಬ್ಬಿಬ್ಬಾದರು.

ಪ್ರಶ್ನೆಗೆ ತಡವರಿಸಿದಾಗ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಂದು ಅನಿಲ್ ಜೈ ಹಿಂದ್ ಕಿವಿಯಲ್ಲಿ ಏನೋ ಹೇಳಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನೀತಿ, ಸಿದ್ಧಾಂತ ನಿಮಗೆ ಗೊತ್ತಿದೆ, ಹಿಂದುಳಿದ ವರ್ಗಗಳ ಭಾಗೀದಾರರನ್ನ ಉತ್ತೇಜಿಸುತ್ತದೆ. ನಿಮ್ಮ ಪ್ರಶ್ನೆ ಆಶ್ಚರ್ಯ ತಂದಿದೆ ಜಾರಿಕೊಂಡರು.