ಬೆಂಗಳೂರು: ಮೂರು ದಿನಗಳ ದೀಪಾವಳಿ ಸಂಭ್ರಮ ಕೊನೆಯಾಗಿದೆ. ರಾಜ್ಯಾದ್ಯಂತ ಅದರಲ್ಲೂ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ಹಲವು ಅವಘಡಗಳು ಸಂಭವಿಸಿವೆ. ಇದೀಗ ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ 190 ಕ್ಕೆ ಏರಿಕೆಯಾಗಿದೆ.

ದೀಪಾವಳಿ ಆರಂಭದಿಂದಲೇ ಪಟಾಕಿ ಸ್ಫೋಟದಿಂದ ಹಲವು ಗಾಯಗಳ ಪ್ರಕರಣಗಳು ವರದಿಯಾಗಿತ್ತು. ಇದೀಗ ನಗರದಲ್ಲಿ ಗಾಯಗೊಂಡವರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ. ಈ ಪೈಕಿ ಹೆಚ್ಚಿನವರ ಕಣ್ಣಿಗೆ ಗಾಯಗಳಾಗಿವೆ. ಅದರಲ್ಲೂ 8 ಜನರು ಶಾಶ್ವತವಾಗಿ ದೃಷ್ಠಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಗಾಯಾಳುಗಳ ಪೈಕಿ 60% ಜನರ ಕಣ್ಣುಗಳಿಗೆ ಗಾಯಗಳಾಗಿವೆ. ಈಗಾಗಲೇ ನಗರದ ನಾರಾಯಣ ನೇತ್ರಾಲಯಕ್ಕೆ 75 ಜನರನ್ನು ದಾಖಲು ಮಾಡಲಾಗಿದೆ. ಇನ್ನು ಮಿಂಟೋ ಆಸ್ಪತ್ರೆಯಲ್ಲಿ 25 ಕ್ಕೂ ಹೆಚ್ಚು ಜನರು ದಾಖಲಾಗಿದ್ದಾರೆ.