ಬೆಂಗಳೂರು: ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತ ಅವರನ್ನು ಇನ್ನು ಸೋಶಿಯಲ್ ಮೀಡಿಯಾದಲ್ಲಿ ದಿವ್ಯಾ ವಸಂತಳನ್ನು ಬಹಳ ಟ್ರೋಲ್ ಮಾಡಲಾಗುತ್ತಿದೆ.ಇಂದಿರಾನಗರದ ಟ್ರೀ ಸ್ಪಾ & ಬ್ಯೂಟಿ ಮಾಲೀಕ ಸೇರಿದಂತೆ ಹಲವರನ್ನು ಬೆದರಿಸಿ ಸುಲಿಗೆ ಮಾಡಿರುವ ಗ್ಯಾಂಗ್ನಲ್ಲಿ ದಿವ್ಯಾ ಹೆಸರು ಕೇಳಿಬಂದಿತ್ತು. ಇದೀಗ ತಮ್ಮ ಮಗಳನ್ನು ಟ್ರೋಲ್ ಮಾಡುತ್ತಿರುವ ಬಗ್ಗೆ ದಿವ್ಯಾ ತಾಯಿ ಕಣ್ಣೀರು ಹಾಕಿದ್ದಾರೆ.
ವಿಡಿಯೊದಲ್ಲಿ ವಸಂತಮ್ಮ ಮಾತನಾಡಿ ʻʻನನ್ನ ಮಗಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದೀರಾ. ಮಾತನಾಡಿದವರೆಲ್ಲ ದರ್ಶನ್ ಫ್ಯಾನ್ಸ್ ಅಂತ ಚೆನ್ನಾಗಿ ಗೊತ್ತು. ಆದರೆ ಅವಳು ತಪ್ಪು ಮಾಡಿದ್ದಾಳೋ ಇಲ್ಲವೋ ಎನ್ನುವುದು ಬಂದ ಮೇಲೆ ಗೊತ್ತಾಗತ್ತೆ. ಅವಳ ಕೆಲಸ ಮಾಡಿದ್ದಾಳೆ. ನಮಗೂ ದರ್ಶನ್ ಇಷ್ಟ. ನಮ್ಮ ಮಕ್ಕಳಿಗೂ ಇಷ್ಟ. ಆಕೆಗೆ ಏನು ಕೆಲಸ ಕೊಟ್ಟಿದ್ದಾರೆ. ಅದು ಮಾಡಿದ್ದಾಳೆ, ಅವಳೇ ಬಂದು ಅದಕ್ಕೆ ಉತ್ತರ ಕೊಡುತ್ತಾಳೆ. ಅಲ್ಲಿಯವರೆಗೆ ಕೆಟ್ಟದಾಗಿ ಏನೂ ವೈರಲ್ ಮಾಡಬೇಡಿ. ನಿಮ್ಮ ಸಪೋರ್ಟ್ ಇರಬೇಕು. ಅವಳು ಏನು ತಪ್ಪು ಮಾಡಿದ್ದಾಳೋ ಇಲ್ವೋ ದೇವರು ನೋಡ್ಕೋತ್ತಾನೆ.
ಟಿವಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವರು ಏನು ಕೆಲಸ ಕೊಡುತ್ತಿದ್ದರೂ ಅದನ್ನಷ್ಟೇ ಮಾಡ್ತಾ ಇದ್ದಳು.ನಿಮ್ಮ ಮನೆ ಹೆಣ್ಣುಮಗಳೆಂದು ತಿಳ್ಕೊಳಿ.ನೀವು ಅಂದುಕೊಂಡಂತೆ ನನ್ನ ಮಗಳು ಕೆಟ್ಟವಳಲ್ಲ. ಅವಳು ದರ್ಶನ್ ಅಭಿಮಾನಿ. ಅವಳು ಕೆಟ್ಟವಳಲ್ಲ, ಇಷ್ಟು ದಿನ ದಿವ್ಯಾಳನ್ನು ಹೇಗೆ ಬೆಳೆಸಿದ್ದೀರೋ ದಿವ್ಯಾನ, ಅದೇ ಬೆಳೆಸಿ, ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇನೆʼʼಎಂದು ಕಣ್ಣೀರಿಟ್ಟಿದ್ದಾರೆ
https://x.com/kannadaboxoffic/status/1814881306943365394

