ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನದಿಂದ ಬರೋಬ್ಬರಿ 10 ಲಕ್ಷ ಕೆ.ಜಿ ನಂದಿನಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಸೋಮವಾರ ಒಂದೇ ದಿನ 2.50 ಲಕ್ಷ ಕೆಜಿ ತುಪ್ಪವನ್ನು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ತಿರುಪತಿಗೆ ಕಳುಹಿಸಿಕೊಟ್ಟಿದೆ.

ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂದು ತಿರುಮಲ ತಿರುಪತಿ ದೇವಸ್ಥಾನ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕೆಎಂಎಫ್‌ ಉತ್ಪಾದನೆಯನ್ನು ಹೆಚ್ಚಿಸಿದೆ.

ಮೊದಲ ಭಾಗವಾಗಿ ಮಂಡ್ಯದ ಹಾಲು ಒಕ್ಕೂಟದಿಂದ ತುಪ್ಪ ಪೊರೈಕೆ ಮಾಡಿದ್ದು, ಇನ್ನುಳಿದ ತುಪ್ಪವನ್ನು ಇತರೆ ಮಹಾ ಮಂಡಳಿಯಿಂದ ಕೆಎಂಎಫ್‌ ಕಳುಹಿಸಿ ಕೊಡಲಿದೆ. ತಿರುಪತಿ ಅಗತ್ಯಕ್ಕೆ ತಕ್ಕಂತೆ ನಂದಿನಿ ತುಪ್ಪ ಪೂರೈಕೆ ಮಾಡುವುದಾಗಿ ಕೆಎಂಎಫ್‌ ತಿಳಿಸಿದೆ.