ದಾವಣಗೆರೆ

ಮುಂದಿನ ಬಜೆಟ್ ನಲ್ಲಿ ಪತ್ರಕರ್ತರಿಗೆ ಉಚಿತ ಬಸ್​ ಪಾಸ್​​​ ನೀಡಲು ನಿರ್ಧಾರ: ಸಿಎಂ

ದಾವಣಗೆರೆ: ಮುಂದಿನ ಬಜೆಟ್‌ನಲ್ಲೇ ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್​ ಪಾಸ್​​ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು ಈ ಘೋಷಣೆ ಮಾಡಿದ್ದಾರೆ.

ಪತ್ರಿಕೆಯ ಮಹತ್ವದ ಕುರಿತು ಮಾತನಾಡಿದ ಮುಖ್ಯಮಂತ್ರಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ‌ ಗಾಂಧಿ, ಅಂಬೇಡ್ಕರ ಅವರು ಸಹ ಪತ್ರಕರ್ತರಾಗಿದ್ದರು. ಆ ಸಮಯದಲ್ಲಿ ಪತ್ರಿಕೆಗಳು ಅದ್ಭುತ ಕೆಲಸ ಮಾಡಿವೆ ಎಂದರು.

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ʼಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕಾಗಿದ್ದು ಪತ್ರಕರ್ತನ ಜವಾಬ್ದಾರಿ. ಹೀಗಿರುವಾಗ ಮಾಧ್ಯಮ ಮೌಢ್ಯವನ್ನು ಬೆಂಬಲಿಸುವಂತಿರಬಾರದುʼ ಎನ್ನುತ್ತ, ತಮ್ಮ ಕಾರ್ ಮೇಲೆ ಕಾಗೆ ಕುಳಿತಾಗ ಹಬ್ಬಿಸಲಾಗಿದ್ದ ಸುದ್ದಿ ಹಾಗು ಚಾಮರಾಜನಗರಕ್ಕೆ ಹೋದರೆ ಸಿಎಂ ‌ಹುದ್ದೆ ಹೋಗುತ್ತದೆ ಎಂಬ ಊಹೆಯನ್ನು ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಸರ್ಕಾರದ ಕೆಲ ಯೋಜನೆಗಳ ಬಗ್ಗೆ ಮಾತನಾಡಿ, ನಾವು ಕೊಟ್ಟ ಗ್ಯಾರೆಂಟಿಯಿಂದ ಎಲ್ಲ ಜಾತಿ, ಧರ್ಮದವರಿಗೆ ಸಹಾಯ ಆಗಿದೆ. ನಾನು ಸಿಎಂ ಅದ ಮೇಲೆ ಮಾಶಾಸನ ಹೆಚ್ಚಿಸಿದ್ದೇನೆ. ಕಾರ್ಮಿಕ ಇಲಾಖೆಯಿಂದ ವಿಮೆ ಯೋಜನೆ ಜಾರಿಗೆ ತಂದಿದ್ದು ಸಹ ನಮ್ಮ ಸರ್ಕಾರ ಎಂದು ಹೇಳಿದರು.

Maithri S

Recent Posts

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

8 mins ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

17 mins ago

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

29 mins ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

48 mins ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

53 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

1 hour ago