ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ವಿವಿಐಪಿ ಸೌಲಭ್ಯ ಕೊಡುತ್ತಿರುವುದು ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರಾಜ್ಯ ಸರ್ಕಾರದ ಆಡಳಿತ ಮತ್ತು ಜೈಲಿನ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಎದ್ದಿದೆ.
ಈ ಸುದ್ದಿಯ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿಕೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. X ನಲ್ಲಿ ಮಾಹಿತಿ ಹಂಚಿಕೊಂಡಿರುವ ಶರ್ಮಾ, ಕನ್ನಡ ನಟ ದರ್ಶನ್ ತೂಗದೀಪ್ ಅತ್ಯಾಚಾರ ಆರೋಪಿ ಎಂದು ಸಂಭೋದಿಸಿದ್ದಾರೆ.
ಜೈಲಿನಲ್ಲಿ ವಿಶೇಷ ಆತಿಥ್ಯ ಬಗ್ಗೆ ಟ್ವೀಟ್ ಮಾಡಿ, ಕಾಂಗ್ರೆಸ್ ಪಕ್ಷ ಅಧಿಕಾರ ದಲ್ಲಿರುವ ಅತ್ಯಾಚಾರ, ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಟ ದರ್ಶನ್ ಗೆ ವಿಶೇಷ ಸವಲತ್ತು ನೀಡಲಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಾ ಪ್ರಿಯಾಂಕಾ ಗಾಂಧಿ , ಸುಪ್ರಿಯಾ ಶ್ರೀನೇಥ್ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಕಮೆಂಟ್ ಮಾಡಿರುವ ಹಲವು ಮಂದಿ ದರ್ಶನ್ ಅತ್ಯಾಚಾರಿಯಲ್ಲ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿರುವ ನೀವು ಈ ಬಗ್ಗೆ ತಿಳಿದುಕೊಳ್ಳದೇ ಏನೇನೋ ಟ್ವೀಟ್ ಮಾಡಬೇಡಿ. ಅವನು ಅತ್ಯಚಾರಿಯಲ್ಲ ರೇಣುಕಾಸ್ವಾಮಿ ಕೊಲೆ ಆರೋಪಿ, ನಿಮ್ಮ ಹೇಳಿಕೆಯನ್ನು ಬದಲಾವಣೆ ಮಾಡಿ ಎಂದಿದ್ದಾರೆ.
ಇನ್ನು ದರ್ಶನ್ ಅಭಿಮಾನಿಗಳಂತು ರೊಚ್ಚಿಗೆದ್ದಿದ್ದು, ನೀವು ಆ ಹುದ್ದೆಗೆ ಅನ್ಫಿಟ್ ಎಂದು ಆಕ್ರೋಶ ವ್ಯಕ್ತಪಡಿಸಿರುವುದು ಮಾತ್ರವಲ್ಲ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈವರಗೆ ಯಾರದ್ದೆಲ್ಲ ಹೆಸರು ಕೇಳಿ ಬಂದಿದೆ. ಅಂತವರ ಹೆಸರನ್ನೆಲ್ಲ ಉಲ್ಲೇಖಿಸಿ ದರ್ಶನ್ ಅತ್ಯಾಚಾರ ಪ್ರಕರಣ ಆರೋಪಿಯಲ್ಲಿ ಎಂದಿದ್ದಾರೆ.

