ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ ಬೆನ್ನಲ್ಲೇ, ನಿರ್ದೇಶಕ ಸೌಂದರ್ಯ ಜಗದೀಶ್ ಅವರ ಸಾವಿಗೆ ಒಂದು ಟ್ವಿಸ್ಟ್‌ ಸಿಕ್ಕಿದೆ. ಸೌಂದರ್ಯ ಜಗದೀಶ್ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ತಮ್ಮ ನಿವಾಸದಲ್ಲಿ ಕಳೆದ ಏ.14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನಲೇ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದವು.

ಸೌಂದರ್ಯ ಜಗದೀಶ್ ಅವರ ಅಕೌಂಟ್‌ನಿಂದ ಕೋಟಿಗಟ್ಟಲೆ ಹಣ ಪವಿತ್ರಾ ಗೌಡ ಅಕೌಂಟ್‌ಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಇದೀಗ ಜಗದೀಶ್ ಸೂಸೈಡ್‌ಗೂ ಈ ಹಣದ ವರ್ಗಾವಣೆಗೂ ಸಂಬಂಧ ಇದೆಯಾ ಎನ್ನುವ ಅನುಮಾನ ಶುರುವಾಗಿದೆ. ಮಾಹಿತಿ ಪ್ರಕಾರ ಪವಿತ್ರಾ ಗೌಡ ಅವರು ಮನೆ ಖರೀದಿಸಲು ಜಗದೀಶ್‌ 2 ಕೋಟಿ ರೂ ದುಡ್ಡು ಕೊಟ್ಟಿದ್ದಾರೆ ಎನ್ನಲಾಗಿದೆ.

ಕಳೆದ 2017ರ ನವೆಂಬರ್​ 13ರಂದು ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ಅವರಿಂದ 1 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ.2018ರ ಜನವರಿ 23 ರಂದು ಪವಿತ್ರಾಗೌಡ ಅವರಿಗೆ ಮತ್ತೆ 1 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ. 2018, ಜನವರಿ 24 ರಂದು ಪವಿತ್ರಾ ಗೌಡ ಅವರು RR ನಗರ ಬಳಿಯ ಕೆಂಚನಹಳ್ಳಿಯಲ್ಲಿ 1.75 ಲಕ್ಷ ಮೌಲ್ಯದ ಮನೆ ಖರೀದಿಸಿದ್ದಾರೆ. ಅಲ್ಲದೇ ಖರೀದಿ ಪತ್ರದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಸಾಕ್ಷಿಯಾಗಿ​ ಸಹಿ ಹಾಗಿದ್ದಾರೆ.

ಇನ್ನೂ ಸೌಂದರ್ಯ ಜಗದೀಶ್‌ ಸಾವಿನ ಒಂದು ತಿಂಗಳ ನಂತರ ಅವರ ರೂಮ್‌ನಲ್ಲಿ ಡೆತ್‌ನೋಟ್‌ ಪತ್ತೆಯಾಗಿತ್ತು ಅದರಲ್ಲಿ ನನಗೆ 60 ಕೋಟಿ ರೂ ನಷ್ಟವಾಗಿದೆ ಎಂದು ಬರೆದುಕೊಂಡಿತ್ತು ಹಾಗಾಗಿ ಇನ್ನು ಸಂಶಯ ಹೆಚ್ಚಾಗಿದೆ.