ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಜನಪ್ರತಿನಿಧಿಗಳ ಕೋರ್ಟ್ಗೆ ಎಸ್ಐಟಿಯಿಂದ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಎಸ್ಐಟಿಯ ತನಿಖಾಧಿಕಾರಿ ಸುಮರಾಣಿಯವರಿಂದ 42ನೇ ಎಸಿಎಂಎಂ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಹೆಚ್.ಡಿ.ರೇವಣ್ಣ ವಿರುದ್ಧ ಸಲ್ಲಿಕೆಯಾದ ಚಾರ್ಜ್ಶೀಟ್ನಲ್ಲಿ ರೇವಣ್ಣ ಸಂತ್ರಸ್ತೆಗೆ ಹಣ್ಣು ಕೊಟ್ಟು ದೌರ್ಜನ್ಯ ಮಾಡುತ್ತಿದ್ದರು ಎಂದು ಉಲ್ಲೇಖವಾಗಿದೆ. ಹಣ್ಣು ಕೊಡುವ ನೆಪದಲ್ಲಿ ಹೆಚ್.ಡಿ ರೇವಣ್ಣ ನಿರಂತರ ದೌರ್ಜನ್ಯ ಎಸಗಿರುವುದು ಉಲ್ಲೇಖವಾಗಿದೆ. ಹೊಳೆನರಸಿಪುರದ ಚೆನ್ನಾಂಬಿಕ ನಿವಾಸದಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ತನಿಖೆ ವೇಳೆ ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಸಲ್ಲಿಕೆಯಾದ ದೋಷಾರೋಪಪಟ್ಟಿಯಲ್ಲಿ, ಮನೆಯಲ್ಲಿ ತಾಯಿ ಇಲ್ಲದ ವೇಳೆ ಸಂತ್ರಸ್ತೆ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಹಾಸನ ಮತ್ತು ಬೆಂಗಳೂರಿನ ನಿವಾಸದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಬೆಂಗಳೂರಿನ ಬಸವನಗುಡಿ ನಿವಾಸದಲ್ಲಿ ಸಂತ್ರಸ್ತೆಯನ್ನು ರೂಮ್ನೊಳಗೆ ಕರೆದುಕೊಂಡು ಹೋಗಿ ಡೋರ್ ಲಾಕ್ ಮಾಡಿ ಪ್ರಜ್ವಲ್ ಅತ್ಯಾಚಾರ ನಡೆಸುತ್ತಿದ್ದರು ಎಂದು ಉಲ್ಲೇಖವಾಗಿದೆ. ಅದು ಮಾತ್ರವಲ್ಲ ಈಗ ಒಂಟಿಯಾಗಿ ಸಿಕ್ಕಿದ್ದೀಯಾ, ಇವತ್ತು ನಾನು ಹೇಳಿದ ಹಾಗೇ ಕೇಳದೇ ಇದ್ರೆ ನಿನ್ನ ಕಥೆ ಮುಗಿಸುತ್ತೇನೆ ಎಂದು ಪ್ರಜ್ವಲ್ ಬೆದರಿಕೆ ಹಾಕುತ್ತಿದ್ದರು. ಸಂತ್ರಸ್ತೆ ಎಷ್ಟೇ ಬೇಡಿಕೊಂಡರು ಬಿಡದೆ ಬಟ್ಟೆ ಬಿಚ್ಚಿಸಿದ್ರು ಎಂಬ ಬಗ್ಗೆಯೂ ಚಾರ್ಜ್ಶೀಟ್ನಲ್ಲಿ ನಮೂದಿಸಲಾಗಿದೆ.
ಹೀಗಾಗಿ ತಂದೆ ಮಗನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

