ಬೆಂಗಳೂರು : ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.68 ಕೋಟಿ ರೂಪಾಯಿ ಮೌಲ್ಯದ 2 ಕೆಜಿ 579 ಗ್ರಾಂ ಚಿನ್ನವನ್ನು ಜಪ್ತಿ ಕಸ್ಟಮ್ಸ್​ ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ. ದುಬೈನಿಂದ ಬೆಂಗಳೂರಿಗೆ EK 564 ವಿಮಾನದಲ್ಲಿ ಬಂದಿದ್ದ ಮುರ್ತಾಜಿಮ್, ಶೇಖ್ ಮೊಹಮ್ಮದ್ ಇಮ್ರಾನ್ ಅವರಿಂದ ಚಿನ್ನ ವಶಕ್ಕೆ ಪಡೆದು ಸದ್ಯ ಇಕಸ್ಟಮ್ಸ್​ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇಬ್ಬರು ಆರೋಪಿಗಳು 1.68 ಕೋಟಿ ರೂಪಾಯಿ ಮೌಲ್ಯದ 2 ಕೆಜಿ 579 ಗ್ರಾಂ ಚಿನ್ನವನ್ನು ವಿದೇಶದಿಂದ ಬಟ್ಟೆಗಳಲ್ಲಿ ಮರೆಮಾಚಿ ತಂದಿದ್ದರು. ಏರ್‌ಪೋರ್ಟ್‌ನಲ್ಲಿ ಪರಿಶೀಲನೆ ವೇಳೆ ಕಸ್ಟಮ್ಸ್​ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.