ಬೆಂಗಳೂರು : ಚುನಾವಣೆ ಮುಗಿದ ಬೆನ್ನಲ್ಲಿಯೇ ಒಂದೊಂದಾಗಿ ಎಲ್ಲರದ ದರದಲ್ಲೂ ಏರಿಕೆ ಆಗುತ್ತಿದೆ. ಒಂದೆಡೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೊಂಡರೆ. ಮತ್ತೊಂದು ಅಗತ್ಯವಸ್ತುವಾದ ಹಾಲಿನ ದರದಲ್ಲೂ ಏರಿಕೆ ಮಾಡಿದೆ.ಇದರ ಬೆನ್ನಲ್ಲಿಯೇ ಹೋಟೆಲ್ ಉದ್ಯಮಿಗಳು ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿಯೇ ಕಾಫಿ, ಟೀ, ತಿಂಡಿ ಬೆಲೆಯ ಏರಿಕೆಯ ಮೇಲೂ ಇದು ಪರಿಣಾಮ ಬೀರಲಿದೆ ಎಂದಿದ್ದಾರೆ.
ಹಾಲಿನ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಿಗಳಿಗೆ ನಷ್ಟವಾಗಲಿದೆ. ನಂದಿನಿ ಹಾಲನ್ನು ಅತೀ ಹೆಚ್ಚು ಬಳಕೆ ಮಾಡೋದು ಹೋಟೆಲ್ ಉದ್ಯಮಿಗಳು. ಹೀಗಾಗಿ ಹೊಟೇಲ್ ನಡೆಸೋದು ಕಷ್ಟವಾಗಿದೆ.ಇದೀಗ ಹಾಲಿನ ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ನುಂಗಲಾರದ ತುತ್ತಾಗಿದೆ ನಾವು ಹೋಟೆಲ್ ಗಳಲ್ಲಿ ಕಾಫಿ,ಟೀ ತಿಂಡಿ ಬೆಲೆ ಏರಿಕೆ ಬಗ್ಗೆ ಸಭೆ ಕರೆದು ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರು ಹೋಟೆಲ್ ಮಾಲಿಕರ ಸಂಘಟನೆ ಅಧ್ಯಕ್ಷ ಪಿಸಿರಾವ್ ಹೇಳಿದ್ದಾರೆ.

