ಬೆಂಗಳೂರು : ಹೆಚ್ಚಾಗಿ ಜನ ಬೇಸಿಗೆಯಲ್ಲಿ ಎಳನೀರನ್ನು ಕುಡಿಯಲು ಬಯಸುತ್ತಾರೆ. ಆದರೆ ಈ ವರ್ಷ ಮಳೆಗಾಲದಲ್ಲಿಯೂ ಎಳನೀರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.ಎಳನೀರು ಬೆಲೆ ಬೇಸಿಗೆಯಲ್ಲಿ 60 ರಿಂದ 70 ರೂಪಾಯಿ ದಾಟಿತ್ತು. ಆದಾದ ನಂತರ ಮಳೆಗಾಲ ಆರಂಭವಾದ ಮೇಲೆ 45 ರೂಪಾಯಿಗೆ ಇಳಿದಿತ್ತು. ಆದರೆ ಮಳೆಗಾಲವಿದ್ದರೂ 50 ರಿಂದ 60 ರೂಗೆ ಎಳನೀರು ಮಾರಾಟವಾಗುತ್ತಿದೆ. ಇದೀಗ ಏರಿಕೆ ಇನನೂ ಏರಿಕೆ ಅಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರತಿವರ್ಷ ಮಳೆಗಾಲದಲ್ಲಿ 30 ರಿಂದ 40 ರೂಪಾಯಿ ಇರ್ತಿತ್ತು. ಆದರೆ ಈ ಬೇಸಿಗೆಯಿಂದ ಮಳೆಗಾಲದವರೆಗೂ ಒಂದೇ ಬೆಲೆ ಇದೆ. ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಎಳ ನೀರನ್ನ ಕುಡಿಯಲೇಬೇಕು. ಆದರೆ ಇಷ್ಟೊಂದು ಬೆಲೆ ಇದ್ದರೆ ಹೇಗೆ ಎಂದು ಗ್ರಾಹಕ ಗೀತಾರಾಮಚಂದ್ರ ಅವರು ಪ್ರಶ್ನಿಸಿದರು.

