News Karnataka Kannada
Thursday, May 02 2024
ಚಿತ್ರದುರ್ಗ

ಚಿತ್ರದುರ್ಗ: ಜ್ಞಾನಭಾಸ್ಕರ ಸ್ವಾಮೀಜಿ ಅನುಮಾನಸ್ಪದ ಸಾವು

Swamiji
Photo Credit :

ಚಿತ್ರದುರ್ಗ: ಇಂದು ವಿಶ್ವಕರ್ಮ ಸಮಾಜದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಜ್ಞಾನಭಾಸ್ಕರ ಸ್ವಾಮೀಜಿ ಮಠದ ಸ್ನಾನದ ಗೃಹದಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾ ಮಠದಲ್ಲಿ ಇಂದು ಬೆಳಗ್ಗೆ ಸ್ನಾನದ ಗೃಹದಲ್ಲಿ ಅವರ ಮೃತದೇಹ ಕಂಡುಬಂದಿದ್ದು, ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವಕರ್ಮ ಸಮಾಜದ ಒಕ್ಕೂಟದಲ್ಲಿನ 63 ಗುರುಗಳ ಪೈಕಿ ಈ ಇವರು ಒಬ್ಬರು. ಮಿಕ್ಕೆಲ್ಲ ಸ್ವಾಮೀಜಿಗಳಿಗೆ ಸಾವಿನ ಮಾಹಿತಿ ನೀಡಲಾಗಿದ್ದು, ಅವರು ಬಂದ ನಂತರ ಅಂತ್ಯಸಂಸ್ಕಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾರಾಯಣಾಚಾರ್ ತಿಳಿಸಿದ್ದಾರೆ.

30 ವರ್ಷಗಳ ಹಿಂದೆ ಜ್ಞಾನಭಾಸ್ಕರ ಸ್ವಾಮೀಜಿ ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಅವರಿಗೆ ಪೂರ್ವಾಶ್ರಮದ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು