News Karnataka Kannada
Wednesday, May 01 2024
ಚಿತ್ರದುರ್ಗ

ಮನೆ ಮನೆ ಭೇಟಿ, ಅಂತರ್ ವೈಯಕ್ತಿಕ ಸಮಾಲೋಚನೆ ಮೂಲಕ ವಿಶೇಷ ಲಸಿಕಾ ಅಭಿಯಾನ

Covid Vaccine
Photo Credit :

ಚಿತ್ರದುರ್ಗ ; ಹಿರಿಯೂರು ತಾಲ್ಲೂಕು ಕೂನಿಕೆರೆ ಗ್ರಾಮದಲ್ಲಿ ಶೇ.80ರಷ್ಟು ಜನರು
ಕೋವಿಡ್ ಲಸಿಕೆ ಪಡೆಯಲು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿ ಕವಿತಾ
ಎಸ್. ಮನ್ನಿಕೇರಿ ಅವರು ಮನೆ ಮನೆಗೆ ಭೇಟಿ ನೀಡಿ ಅಂತರ್ ವೈಯಕ್ತಿಕ ಸಮಾಲೋಚನೆ ನಡೆಸುವ
ಮೂಲಕ ಜನರ ಸಮಸ್ಯೆ ಆಲಿಸಿ, ಸಲಹೆ ಸೂಚನೆ ನೀಡುತ್ತಾ ಕೋವಿಡ್ ಲಸಿಕೆ ಹಾಕಿಸಲಾಯಿತ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆ ವತಿಯಿಂದ ವಿóಶೇಷ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ ಮಾತನಾಡಿ, ಕೋವಿಡ್-19
ಲಸಿಕೆ ಸಂಪೂರ್ಣ  ಸುರಕ್ಷಿತವಾಗಿದೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ.
ಜಿಲ್ಲೆಯಲ್ಲಿ ಈಗಾಗಲೇ ಬಹಳಷ್ಟು ಜನರು ಲಸಿಕೆ ಪಡೆದಿದ್ದಾರೆ. ನಿಮ್ಮ ಮತ್ತು ನಿಮ್ಮ
ಕುಟುಂಬದ ಸುರಕ್ಷತೆಗಾಗಿ ಲಸಿಕೆ ಪಡೆಯಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ಗ್ರಾಮ ನಿಗಾವಣೆ ತಂಡದ ಸದಸ್ಯರು,
ಎ.ವಿ.ಕೊಟ್ಟಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು