News Karnataka Kannada
Friday, May 17 2024
ಚಿಕ್ಕಬಳ್ಳಾಪುರ

ಗ್ರಾಹಕರಿಗೆ ಖುಷಿ, ಬೆಳೆಗಾರರಿಗೆ ಕಹಿ: ಭಾರಿ ಕುಸಿತ ಕಂಡ ಟೊಮೆಟೊ ದರ

Tomato prices fall sharply, consumers happy, growers bitter
Photo Credit : Freepik

ಚಿಕ್ಕಬಳ್ಳಾಪುರ: ದೇಶದಲ್ಲೆಡೆ ಕಳೆದ ಎರಡು ಮೂರು ತಿಂಗಳಿಂದ ಟೊಮೆಟೊ ದರದ್ದೇ ಸುದ್ದಿಯಾಗಿತ್ತು. ಕಿಲೋಗೆ 200-250 ರೂ. ಇದ್ದ ಟೊಮೆಟೊ ದರ ಇದೀಗ ದಿಡೀರ್‌ ಕುಸಿತ ಕಂಡು ಚಿಕ್ಕಬಳ್ಳಾಪುರದಲ್ಲಿ 50-60 ಕ್ಕೆ ಇಳಿದಿದೆ.

ಜಿಲ್ಲೆಯ ಟೊಮೆಟೋ ಮಾರುಕಟ್ಟೆಯಲ್ಲಿ ಗುರುವಾರ 15 ಕೆ.ಜಿ. ಟೊಮೆಟೋ ಬಾಕ್ಸ್‌ ಕೇವಲ 400 ರಿಂದ 700 ರು, ವರೆಗೂ ಮಾರಾಟವಾಗಿದ್ದು ಟೊಮೆಟೋ ದರ ಬರೋಬರಿ ಶೇ.65 ರಿಂದ 70 ಬೆಲೆ ಇಳಿಕೆ ಕಂಡಿದೆ.

ಸತತ ಒಂದು ವಾರದಿಂದ ಟೊಮೆಟೋ ದರ ಕುಸಿಯುತ್ತೇ ಇದ್ದು ಒಂದರೆಡು ದಿನದಲ್ಲಿ ಭಾರೀ ಕುಸಿತ ಕಂಡಿದೆ. ವಾರದ ಹಿಂದೆ 1700, 2000 ರೂ., ಅಸುಪಾಸಿನಲ್ಲಿದ್ದ 15 ಕೆ.ಜಿ. ಟೊಮೆಟೋ ಈಗ 700ಕ್ಕೆ ಕುಸಿತ ಕಂಡಿದ್ದು ಇನ್ನಷ್ಟು ಬೆಲೆ ಕುಸಿಯುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಜೂನ್‌ ಅಂತ್ಯ, ಜುಲೈ ತಿಂಗಳ ಆರಂಭದಲ್ಲಿ ಟೊಮೆಟೋ ಬೆಲೆ ಗಗನಕ್ಕೇರಿತ್ತು. ಇಡೀ ದೇಶದಲ್ಲಿ ಟೊಮೆಟೋ ಬೆಲೆ ಗ್ರಾಹಕರನ್ನು ತೀವ್ರ ಚಿಂತೆಗೀಡು ಮಾಡಿತ್ತು. ಒಂದರೆಡು ತಿಂಗಳು ಬೆಲೆ ಇಳಿಕೆ ಆಗಲ್ಲ ಎಂದು ಅಂದಾಜು ಮಾಡಲಾಗಿತ್ತು. ಆದರೆ, ದೇಶವ್ಯಾಪ್ತಿ ಟೊಮೆಟೋ ಮಾರುಕಟ್ಟೆಗೆ ಪ್ರವೇಶ ಆರಂಭಗೊಂಡ ಬೆನ್ನಲೇ ಟೊಮೆಟೋ ದರ  ಮಾರುಕಟ್ಟೆಯಲ್ಲಿ ಕುಸಿಯುತ್ತಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ 50, 60 ರೂ.: ಇನ್ನೂ ಟೊಮೆಟೋ ದರ ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿರುವ ಬೆನ್ನಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ 1 ಕೆ.ಜಿ. ಟೊಮೆಟೋ ದರ 40 ರಿಂದ 50, ಗುಣಮಟ್ಟದ ಟೊಮೆಟೋ 60 ರೂ.ಗೆ ಮಾರಾಟವಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು