ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನೂತನ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ NOC ನೀಡಲು ಖಾಜಾವಲಿ ಅವರು ದೊಡ್ಡಗಂಜೂರು ಶ್ರೀನಾಥ್ ಎಂಬುವವರಿಂದ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡದ ಕಾರಣ ಶ್ರೀನಾಥ್ ರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಹಿಯಾಳಿಸಿದ್ದರು. ಕೊನೆಗೆ ಶ್ರೀನಾಥ್ ಅವರು ಲಂಚ ನೀಡಲು ಒಪ್ಪಿಕೊಂಡಿದ್ದು ಶ್ರೀನಾಥ್ ಅವರು ಲಂಚ ನೀಡುವಾಗ ಲೋಕಾಯುಕ್ತ ದಾಳಿ ನಡೆಸಿದೆ.