News Karnataka Kannada
Monday, April 29 2024
ಚಿಕ್ಕಬಳ್ಳಾಪುರ

ಕೆಎಸ್ಆರ್​ಟಿಸಿ ಬಸ್ ಗೆ ಬೈಕ್​ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಸಂತೆಕಲ್ಲಹಳ್ಳಿ ಬಳಿ ಕೆಎಸ್ಆರ್​ಟಿಸಿ ಬಸ್ ಗೆ ಬೈಕ್​ ಡಿಕ್ಕಿಯಾದ ಘಟನೆ  ನಡೆದಿದೆ.
Photo Credit : News Kannada

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಸಂತೆಕಲ್ಲಹಳ್ಳಿ ಬಳಿ ಕೆಎಸ್ಆರ್​ಟಿಸಿ ಬಸ್ ಗೆ ಬೈಕ್​ ಡಿಕ್ಕಿಯಾದ ಘಟನೆ  ನಡೆದಿದೆ. ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಿನ್ನಲಿ ಗ್ರಾಮದ ಟಿವಿ ನಿಶಾಂತ್ (35) ಮೃತ ಬೈಕ್ ಸವಾರ.

ಈತ ಕೋಲಾರದಲ್ಲಿ ಮದುವೆಯಾಗಲು ಹೆಣ್ಣು ನೋಡಿಕೊಂಡು ವಾಪಸ್ ಬರುವ ವೇಳೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಹಾಗೂ ಸವಾರ ಬಸ್ ನಡಿ ಸಿಲುಕ್ಕಿದ್ದಾನೆ. ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತನ ಶವವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು