News Karnataka Kannada
Sunday, May 05 2024
ಬೆಂಗಳೂರು

ಚಂದ್ರಯಾನ: 5.20ರಿಂದ ನೇರಪ್ರಸಾರ, ಇಸ್ರೋ ಟ್ವೀಟ್‌

Chandrayaan-20: ISRO tweets live from 5.20 pm
Photo Credit : News Kannada

ಬೆಂಗಳೂರು: ಚಂದ್ರಯಾನದ ಕುರಿತು ದೇಶವಾಸಿಗಳಲ್ಲಿ ಕುತೂಹಲ ಹೆಚ್ಚಿದೆ. ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಕಾಲಿಡುವುದನ್ನು ಕಾಣಲು ದೇಶದ ಪ್ರತಿ ಪ್ರಜೆಗಳೂ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಚಂದ್ರಯಾನ ವೀಕ್ಷಣೆ ನೇರಪ್ರಸಾರ ಸಮಯವನ್ನು ಇಸ್ರೋ ಟ್ವೀಟ್‌ ಮೂಲಕ ತಿಳಿಸಿದೆ.

ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ALS) ಪ್ರಾರಂಭಕ್ಕೆ ಎಲ್ಲವೂ ಸಿದ್ಧವಾಗಿದೆ. ಸಂಜೆ 5 ಗಂಟೆ 44 ನಿಮಿಷ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (LM) ಆಗಮನದ ನಿರೀಕ್ಷೆ. ಕಾರ್ಯಾಚರಣೆಯ ನೇರ ಪ್ರಸಾರ ಸಂಜೆ 5.20ರಿಂದ ಆರಂಭವಾಗಲಿದೆ. ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್​ ಲ್ಯಾಂಡರ್​ ಚಂದಿರನನ್ನು ಸ್ಪರ್ಶ ಮಾಡಲಿದೆ ಎಂದು ಇಸ್ರೋ ಟ್ವೀಟ್​ ಮಾಡಿದೆ.

ಕೃಷ್ಣಮಠದಲ್ಲಿ ಪ್ರಾರ್ಥನೆ ಮಾಡಿದೆ ಎಂದ ಶೋಭಾ: ಇವತ್ತು ಭಾರತದ ಇಸ್ರೋವನ್ನು ಪ್ರಪಂಚ ಕೊಂಡಾಡುವ ರೀತಿ ಆಗಿದೆ. ಚಂದ್ರಯಾನ 3 ಚಂದ್ರನ ಅಂಗಳವನ್ನು ಚುಂಬಿಸುತ್ತದೆ ಎಂಬುದು ಖುಷಿಯ ವಿಚಾರ. ಬೆಳಗ್ಗೆ ಕೃಷ್ಣಮಠಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಭಾರತ 641 ಕೋಟಿ ರೂ ಖರ್ಚು ಮಾಡಿದ್ದು, ವಿಜ್ಞಾನಿಗಳು ಪ್ರಯತ್ನ ಮಾಡಿದ್ದಾರೆ. ವಿಜ್ಞಾನಿಗಳ ಪ್ರಯತ್ನ ಯಶಸ್ಸು ಕಾಣಲಿ ವಿಜ್ಞಾನಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು