ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ರಸ್ತೆಯಲ್ಲಿ ಕಾರಿಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು, ಅದೃಷ್ಟವಶಾತ್‌ ಕಾರಿನಲ್ಲಿದ್ದ ಚಾಲಕ ದುರಂತದಿಂದ ಪಾರಾಗಿರುವ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಬೊಮ್ಮನಹಳ್ಳಿಯ ಸಮೀಪದ ರೂಪೇನ ಅಗ್ರಹಾರ ಬಳಿಯ ರಸ್ತೆಯಲ್ಲಿ ಹೊರಟಿದ್ದ ಎಸ್‌ಯುವಿ ಕಾರು ಒಮ್ಮೆಗೇ ನಿಂತಿತು. ತಾಂತ್ರಿಕ ಸಮಸ್ಯೆ ಇರಬಹುದು ಎಂದು ಚಾಲಕ ಕಾರನ್ನು ಮತ್ತೆ ಸ್ಟಾರ್ಟ್ ಮಾಡಲು ಮುಂದಾದಾಗ ದಿಢೀರ್‌ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಚಾಲಕ ಕಾರಿನಿಂದ ಹೊರಗಡೆ ಬಂದು ಜೀವ ಉಳಿಸಿಕೊಂಡಿದ್ದಾರೆ.