ಬೆಂಗಳೂರು: ಹಾವುಗಳ ಕಾಟ, ವಿಷಜಂತುಗಳ ಕಾಟದಿಂದ ಬೆಂಗಳೂರಿನ ಜನರು ಬೇಸತ್ತಿದ್ದು, ಇದು ಹಾವುಗಳ ಸಂತಾನೋತ್ಪತ್ತಿ ಕಾಲವಾಗಿದ್ದು, ನಗರದ ಹಲವು ಪ್ರದೇಶದಲ್ಲಿ ಮನೆಯೊಳಗೆ ಹಾವು ಕಾಣಸಿಗುತ್ತಿವೆ. ಹೀಗಾಗಿ ಪಾಲಿಕೆ ವನ್ಯ ಜೀವಿ ಸಂರಕ್ಷಣಾ ತಂಡ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ರವಾನಿಸಿದೆ.
ಈಗಾಗಲೇ ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ ಮತ್ತು ರಾಜರಾಜೇಶ್ವರಿನಗರ ಸೇರಿ ಕೆಲವು ಹಳ್ಳಿಗಳಿಂದ ಬಿಬಿಎಂಪಿಗೆ ಕರೆಗಳು ಬಂದಿವೆ. ವನ್ಯ ಜೀವಿ ಸಂರಕ್ಷಣಾ ತಂಡ ಕಳೆದ ವಾರ 100 ಕರೆಗಳನ್ನು ಸ್ವೀಕರಿಸಿದೆ. ಸರಾಸರಿ ಪ್ರತಿದಿನ 30 ಕರೆಗಳು ಬಂದಿವೆ. ಹೆಚ್ಚಿನ ಕರೆಗಳು ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯದಿಂದ ಬಂದಿವೆ.
ಸಹಾಯವಾಣಿ ಸಂಖ್ಯೆಗಳು: ಬಿಬಿಎಂಪಿ ವನ್ಯಜೀವಿ ಸಹಾಯವಾಣಿ: 1533, ಕರ್ನಾಟಕ ಅರಣ್ಯ ಇಲಾಖೆ ಸಹಾಯವಾಣಿ: 1926, ಬಿಬಿಎಂಪಿ ವನ್ಯ ಜೀವಿ ಸಂರಕ್ಷಣಾ ಸಹಾಯವಾಣಿ: 9902794711 ಗೆ ಕರೆ ಮಾಡಿ.

