ಬೆಂಗಳೂರು : ಬಿಎಂಟಿಸಿ ಬಸ್‌ ಪ್ರಯಾಣಿಕನೊಬ್ಬ ಸ್ಕ್ರೂಡ್ರೈವರ್‌ ಹಿಡಿದು ಬಸ್‌ ಚಾಲಕ ಮತ್ತು ನಿರ್ವಾಹಕನಿಗೆ ಬೆದರಿಕೆ ಹಾಕಿರುವ ಘಟನೆ ಗುರುವಾರ ಸಂಜೆ ಹೊಸೂರು ಹೆದ್ದಾರಿಯ ಬಸ್ ಒಂದರಲ್ಲಿ ನಡೆದಿದೆ.

ಅತ್ತಿಬೆಲೆಯಿಂದ ಮೆಜೆಸ್ಟಿಕ್‌ ನಡುವೆ ಸಂಚರಿಸುವ ಬಸ್‌ ನಲ್ಲಿ ನಿನ್ನೆ ಸಂಜೆ ನಾಲ್ಕು ಗಂಟೆಯ ವೇಳೆಗೆ ಪ್ರಯಾಣಿಕನೊಬ್ಬ ಹತ್ತಿದ್ದ. ಕೋನಪ್ಪನ ಅಗ್ರಹಾರದ ಬಳಿ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಿದಾಗ ವಿನಾಕಾರಣ ಕಿರಿಕ್‌ ತೆಗೆದ ಪ್ರಯಾಣಿಕ ತನ್ನ ಕೈಲಿದ್ದ ಚೀಲದಿಂದ ಸ್ಕ್ರೂಡ್ರೈವರ್‌ ತೆಗೆದು ಚಾಲಕ ಹಾಗೂ ನಿರ್ವಾಹಕರಿಗೆ ಬೆದರಿಕೆ ಹಾಕಿದ್ದಾನೆ. ಈ ದೃಶ್ಯವನ್ನು ಬಸ್‌ ನಲ್ಲಿದ್ದ ಕೆಲವು ಪ್ರಯಾಣಿಕರು ಮೊಬೈಲ್‌ ನಲ್ಲಿ ಫೋಟೊ ತೆಗೆದು ಹರಿಬಿಟ್ಟಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ದ ದೂರು ದಾಖಲಾಗಿದೆ.