ಬೆಂಗಳೂರು: ಜೈಲಿನಲ್ಲಿ ಸ್ನೇಹಿತರಾಗಿ ಹೊರ ಬಂದ ನಂತರ ಒಟ್ಟಾಗಿ ಸೇರಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಲಕ ನಗರದ ಬಾಲರಾಜ್‌ (45), ಆಡುಗೋಡಿಯ ಗೌರವ್‌ (21) ಮತ್ತು ಪ್ರವೀಣ್‌ (26) ಬಂಧಿತರು. ಆರೋಪಿ ಗಳಿಂದ 31.27 ಲಕ್ಷ ಮೌಲ್ಯದ 257 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗ ಳ ಪೈಕಿ ಬಾಲರಾಜ್‌ ವಿರುದ್ಧ 21 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಸಿದ್ದಾಪುರ ಠಾಣೆ ವ್ಯಾಪ್ತಿಯ ಬೈರ ಸಂದ್ರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಹಲವು ಕಳ್ಳತನ, ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ ರೂಢಿಗತ ಮೂವರು ಜೈಲಿನಲ್ಲೇ ಪರಸ್ಪರ ಪರಿಚಯ ವಾಗಿದ್ದಾರೆ. ಬಳಿಕ ಹೊರ ಬಂದು ಮತ್ತೆ ಕಳ್ಳತನ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಜೈಲು ಸೇರಿದ್ದ ಆರೋಪಿಗಳು, ಬಿಡುಗಡೆಯಾಗಿ ಬಂದ ಮರು ದಿನವೇ ಕಳ್ಳತನ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದಾಗ ಸ್ಥಳದಲ್ಲಿ ದೊರೆತ ಬೆರಳ ಚ್ಚು ಹಾಗೂ ಇತರೆ ಗುರುತು ಬಾಲರಾಜ್‌ಗೆ ಹೊಲಿಕೆ ಆಗುತ್ತಿತ್ತು. ಹೀಗಾಗಿ ಆತನನ್ನು ತಿಲಕನಗರದಲ್ಲಿ ಬಂಧಿಸಲಾಗಿತ್ತು. ನಂತರ ಈತನ ಮಾಹಿತಿ ಮೇರೆಗೆ ಇತರೆ ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.