ಬೆಂಗಳೂರು: ನಗರದಲ್ಲಿ ಹೈಟೆನ್ಷನ್ ವಿದ್ಯುತ್ ಪ್ರವಹಿಸಿ ನೇಪಾಳ ಮೂಲದ 10 ವರ್ಷದ ಬಾಲಕ ಅನಂತ್ ಸಾವನ್ನಪ್ಪಿದ್ದ ಘಟನೆಯ ಕುರಿತು ಈಗ ಎಫ್.ಐ.ಆರ್ ದಾಖಲಾಗಿದೆ. ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದ ಅನಂತ್ ನ ತಾಯಿ ತುಲಾದೇವಿ ಅವರು ಈ ಹಿಂದೆಯೇ ದೂರು ದಾಖಲಿಸಿದ್ದು,ಈಗ ಕೆ.ಆರ್.ಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಘಟನೆಗೆ ಕಾರಣಕರ್ತರಾಗಿ ಮನೆ ಮಾಲೀಕ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೆಸ್ಕಾಂ ಇಂಜಿನಿಯರ್‌ಗಳು ಮತ್ತು ಬಿಬಿಎಂಪಿ ಸಹಾಯಕ ಇಂಜಿನಿಯರ್‌ಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ106 ಆರೋಪದಡಿ ಪ್ರಕರಣ ದಾಖಲಾಗಿದೆ.
ಬಿಬಿಎಂಪಿ ಸೂಚನೆ ಮತ್ತು ಕಟ್ಟಡ ನಿರ್ಮಾಣ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಿರುವ ಮನೆ ಮಾಲೀಕನ ತಪ್ಪಿದ್ದು,ಕಟ್ಟಡದ ಸಮೀಪವೇ ಹೈಟೆನ್ಷನ್ ತಂತಿ ಪಾಸ್ ಆಗಿದ್ದರೂ ಯಾವುದೇ ಕವರಿಂಗ್ ಅಳವಡಿಸದ ಕೆಪಿಟಿಸಿಎಲ್, ಜೊತೆಗೆ ಬೆಸ್ಕಾಂ ಇಂಜಿನಿಯರ್‌ಗಳು ಹಾಗೂ ಬಿಬಿಎಂಪಿಯ ಸಹಾಯಕ ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಮಗನ ಸಾವು ಸಂಭವಿಸಿದೆ ಎಂದು ತುಲಾದೇವಿ ದೂರು ನೀಡಿದ್ದರು.

