ಬೆಂಗಳೂರು: ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಏರ್ಪೋರ್ಟ್ ನಿಂದ ಎಚ್ಎಸ್ಆರ್ ಲೇಔಟ್ ಕಡೆ ಸಂಚಾರ ಮಾಡ್ತಿದ್ದ ಬಿಎಂಟಿಸಿ ವೋಲ್ವೋ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು ಬೈಕ್ ಹಾಗೂ ಕಾರುಗಳಿಗೆ ಬಸ್ ಡಿಕ್ಕಿ ಹೊಡೆದಿದೆ.
ಈ ಪರಿಣಾಮ ಸರಣಿ ಅಪಘಾತಗಳು ಸಂಭವಿಸಿದ್ದು ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಅಪಘಾತ ದೃಶ್ಯ ಬಸ್ನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳೆದ ದಿನ ಬೆಳಗ್ಗೆ ಹೆಬ್ಬಾಳ ಫ್ಲೈಓವರ್ ಮೇಲೆ ಅಪಘಾತ ಸಂಭವಿಸಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏರ್ಪೋರ್ಟ್ನಿಂದ ಹೆಚ್ಎಸ್ಆರ್ ಲೇಔಟ್ ಕಡೆ ಸಾಗುತ್ತಿದ್ದ KA57F-1794 ನಂಬರ್ನ ಬಿಎಂಟಿಸಿ ವೋಲ್ವೋ ಬಸ್ನಿಂದ ಅಪಘಾತ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ನಾಲ್ಕು ಬೈಕ್ಗಳು ಹಾಗೂ 4 ಕಾರಿಗೆ ವೋಲ್ವೋ ಬಸ್ ಡಿಕ್ಕಿ ಹೊಡೆದಿದೆ. ಚೂರು ಹೆಚ್ಚು ಕಮ್ಮಿ ಆಗಿದ್ರೆ ಹತ್ತಾರು ವಾಹನ ಸವಾರರ ಪ್ರಾಣ ಹೋಗುತ್ತಿತ್ತು. ಅಪಘಾತದ ವಿಡಿಯೋ ಬೆಚ್ಚಿಬೀಳಿಸುವಂತಿದೆ.
#BREAKING : BENGALURU BMTC Volvo bus meets with a series of accidents. The incident took place on Hebbal flyover at 9.25 am yesterday. BMTC driver Rajkumar rams into four two-wheelers, four cars#Bengaluru #Volvobus #busaccident #cctv #Hebbal #accident pic.twitter.com/0kKUiqv3fa
— mishikasingh (@mishika_singh) August 13, 2024

