ಬೆಂಗಳೂರು: ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವೋಲ್ವೋ ಬಸ್ಸಿನ ಬಾಗಿಲಿನಿಂದ ದೂರ ಸರಿಯುವಂತೆ ಕೇಳಿದ ಬಸ್ ಕಂಡಕ್ಟರ್ ಗೆ ಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕಂಡಕ್ಟರ್ ಯೋಗೇಶ್ ನನ್ನು ಜಾರ್ಖಂಡ್ ಮೂಲದ 25 ವರ್ಷದ ಹರ್ಷ್ ಸಿನ್ಹಾ ಎಂಬಾತ ಹೊಟ್ಟೆಗೆ ಇರಿದಿದ್ದಾನೆ. ವೈಟ್ಫೀಲ್ಡ್ ಪೊಲೀಸ್ ಠಾಣೆಯ ಬಳಿ ಈ ಘಟನೆ ನಡೆದಿದ್ದು, ಸುರಕ್ಷತೆಗಾಗಿ ಹಿಂದೆ ಸರಿಯುವಂತೆ ಯೋಗೇಶ್ ಸಿನ್ಹಾ ಅವರನ್ನು ವಿನಂತಿಸಿದ್ದಾರೆ. ಇದರಿಂದ ಕೋಪಗೊಂಡ ಸಿನ್ಹಾ ಯೋಗೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸಿನ್ಹಾ ಅವರು ಬಸ್ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ, ಇದು ಇತರ ಪ್ರಯಾಣಿಕರಲ್ಲಿ ಭೀತಿಯನ್ನುಂಟು ಮಾಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಧಿಕಾರಿಗಳು ಬರುವವರೆಗೂ ಪ್ರಯಾಣಿಕರು ಸಿನ್ಹಾ ಅವರನ್ನು ಬಸ್ ಒಳಗೆ ಲಾಕ್ ಮಾಡಿದರು. ಸಿನ್ಹಾ ಅವರು ಬೆಂಗಳೂರಿನ ಬಿಪಿಒವೊಂದರಲ್ಲಿ ಕೆಲಸ ಮಾಡುತ್ತಿದ್ದರು ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.

https://x.com/lokmattimeseng/status/1841417298222952913?