ಭ್ರಷ್ಟಾಚಾರಕ್ಕೆ ಸಾಕ್ಷಿಬೇಕೆ: ಸುಬ್ರಹ್ಮಣ್ಯ ನಗರ ಠಾಣೆ ಸಿಬ್ಬಂದಿಯಿಂದ ರಾಷ್ಟ್ರಪತಿಗೆ ಪತ್ರ

ಬೆಂಗಳೂರು: ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂಬತ್ತು ಪುಟಗಳ ಪತ್ರವನ್ನು ಕಿರುಕುಳಕ್ಕೆ ಒಳಗಾದ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಪೊಲೀಸರು ಬರೆದಿದ್ದಾರೆ ಎಂದು ಹೇಳಲಾಗಿದೆ. ಪ್ರಭಾರಿ ಪೊಲೀಸ್ ನಿರೀಕ್ಷಕ ಶರಣಗೌಡ ಅವರು ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಣ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ರಜೆಗಾಗಿ ಕೆಳಹಂತದ ಪೊಲೀಸ್‌ ಸಿಬ್ಬಂದಿ ಪೊಲೀಸ್ ಇನ್ಸ್‌ಪೆಕ್ಟರ್‌ರನ್ನು ಸಂಪರ್ಕಿಸಿದಾಗಲೆಲ್ಲಾ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಹಣ ನೀಡಿದರೆ ಮಾತ್ರ ರಜೆ ಪಡೆಯಲು ಸಾಧ್ಯ ಎಂಬ ಷರತ್ತು ವಿಧಿಸುತ್ತಾರೆ ಎಂದು ಆರೋಪಿಸಲಾಗಿದೆ. ಬೀಟ್ ಪೊಲೀಸರಿಗೆ ದ್ವಿಚಕ್ರ ವಾಹನ ಮಂಜೂರು ಮಾಡಲು ರೂ 5,000 ಲಂಚವನ್ನು ನೀಡಬೇಕಾಗಿದೆ. ಪೊಲೀಸ್‌ ಇನ್ಸ್‌ಪೆಕ್ಟರ್ ತನ್ನ ಹೆಂಡತಿಯನ್ನು ಠಾಣೆಗೆ ಕರೆತಂದು ಚೇಂಬರ್‌ನಲ್ಲಿ ಅವರೊಂದಿಗೆ ಮಾತನಾಡುತ್ತಾ ಕುಳಿತಿರುತ್ತಾರೆ. ಈಜುಕೊಳಕ್ಕೆ ತನ್ನ ಮಕ್ಕಳನ್ನು ಕರೆದೊಯ್ಯುವ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಮಕ್ಕಳನ್ನು ಇಲಾಖೆಯ ವಾಹನ ಬಳಸುತ್ತಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಋತುಚಕ್ರದ ಸಮಯದಲ್ಲಿ ರಜೆಗಾಗಿ ಮಹಿಳಾ ಸಿಬ್ಬಂದಿ ಇನ್ಸ್ಪೆಕ್ಟರ್ ಅವರನ್ನು ಸಂಪರ್ಕಿಸಿದರೆ ರಾಜೀನಾಮೆ ನೀಡಿ ಮನೆಗೆ ಹೋಗುವಂತೆ ಕೇಳುತ್ತಾರೆ. ಇನ್ಸ್‌ಪೆಕ್ಟರ್ ತನ್ನ ಪೋಸ್ಟಿಂಗ್‌ಗಾಗಿ 25 ಲಕ್ಷ ರೂ. ಖರ್ಚು ಮಾಡಿರುವುದಾಗಿ ಸಿಬ್ಬಂದಿಗೆ ತಿಳಿಸಿದ್ದು, ಇಲಾಖೆ ಸಿಬ್ಬಂದಿಯ ತಾಪತ್ರಯ ಕೇಳಲು ನಾನು ಇಲ್ಲಿಗೆ ಬಂದಿಲ್ಲ ಎಂದು ಕೂಗಾಡುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದ್ವಿಚಕ್ರ ವಾಹನಕ್ಕೆ 15 ಸಾವಿರ, ಲ್ಯಾಪ್‌ಟಾಪ್‌ ಕಳ್ಳತನಕ್ಕೆ 5 ಸಾವಿರ: ಪೊಲೀಸ್ ಠಾಣೆಯ ಓರ್ವ ಸಿಬ್ಬಂದಿ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ್ದು ಕೂಡ ವೈರಲ್‌ ಆದ ಪತ್ರದಲ್ಲಿದೆ. ಪತ್ರದಲ್ಲಿ ವಿವಿಧ ಬಾರ್‌ಗಳು, ಮಾಲ್‌ಗಳು ಮತ್ತು ಪಬ್‌ಗಳಿಗೆ ನಿಗದಿತ ಲಂಚದ ಮೊತ್ತದ ವಿವರಗಳನ್ನು ವಿವರಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಎಫ್‌ಐಆರ್ ದಾಖಲಿಸಲು 15 ಸಾವಿರ ಹಾಗೂ ಲ್ಯಾಪ್‌ಟಾಪ್ ಕಳ್ಳತನಕ್ಕೆ 5 ಸಾವಿರ ರೂಪಾಯಿ ವಸೂಲಿ ನಿಗದಿಗೊಳಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಸುಳ್ಳು ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾದ ಯುವಕನ ಆತ್ಮಹತ್ಯೆ ಪ್ರಕರಣದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ತಮ್ಮನ್ನು ಸಾಮೂಹಿಕವಾಗಿ ಬೇರೆ ಠಾಣೆಗೆ ಸಾಮೂಹಿಕವಾಗಿ ವರ್ಗಾವಣೆ ಮಾಡುವಂತೆ ಸಂತ್ರಸ್ತ ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

Umesha HS

Recent Posts

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

22 mins ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

48 mins ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

57 mins ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

57 mins ago

ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ: ಅರ್ಜಿ ವಿಚಾರಣೆಗೆ ಹಸಿರು ಪೀಠ ಅಂಗೀಕಾರ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…

1 hour ago

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಪ್ರಮುಖ ಆರೋಪಿ ಬಂಧನಕ್ಕೆ ಪತ್ನಿ ನೂತನ ಸಂತಸ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮುಸ್ತಫಾ ಪೈಚಾರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಮುಸ್ತಫಾ…

1 hour ago