ಬೆಂಗಳೂರು: ಬಿಜೆಪಿಗರು ರ್ಯಾಲಿ ಮಾಡ್ತಿರೋದು ಧರ್ಮಸ್ಥಳದ ಪರವಾಗಿಯೇ ಹೊರತು ನ್ಯಾಯದ ಪರ ಅಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳಿಗೆ ಮುಕ್ತಿ ಸಿಗಲಿ, ಅದು ಸತ್ಯನಾ ಅಥವಾ ಸುಳ್ಳಾ ಅನ್ನೋದು ಜನಕ್ಕೆ ಗೊತ್ತಾಗಲಿ ಅಂತಾ ಎಸ್ಐಟಿ ರಚನೆ ಮಾಡಿದ್ದೇವೆ.
ಅದರಲ್ಲಿ ಈಗ ಏನು ಸಿಕ್ತಿಲ್ಲ ಅಂತ ಗೊತ್ತಾದ ಮೇಲೆ ಬಿಜೆಪಿಗರು ಧರ್ಮಸ್ಥಳದ ಪರವಾಗಿ ರ್ಯಾಲಿ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

