ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಕೆಲವೇ ದಿನಗಳಿದ್ದು, ಬಿಜೆಪಿ ಹೈಕಮಾಂಡ್ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ಹೀಗಾಗಿ ಇಂದು ಬಿಜೆಪಿ ಹೈಕಮಾಂಡ್ ಅಂತಿಮವಾಗಿ ತನ್ನ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.
ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಮಾರುತಿ ರಾವ್ ಮೂಳೆ ಅವರಿಗೆ ಟಿಕೆಟ್ ನೀಡಲಾಗಿದೆ. ಮೂರು ಸ್ಥಾನಗಳಿಗೆ 44 ಆಕಾಂಕ್ಷಿಗಳಿದ್ದರು. 12 ಹೆಸರನ್ನು ಶಾರ್ಟ್ ಲೀಸ್ಟ್ ಮಾಡಿದ ಕೋರ್ ಕಮಿಟಿ, ಒಂದು ಸ್ಥಾನಕ್ಕೆ ಮೂರು-ನಾಲ್ಕು ಹೆಸರು ಆಯ್ಕೆ ಮಾಡಿತ್ತು. ಸರ್ವಾನುಮತದಿಂದ ರವಿಕುಮಾರ್ ಹೆಸರು ಶಿಪಾರಸು ಮಾಡಲಾಗಿತ್ತು. ಸಂಘಟನಾ ವಿಭಾಗದಿಂದ ಸಿಟಿ ರವಿ ಹೆಸರುಶಿಪಾರಸು ಮಾಡಲಾಗಿತ್ತು. ಸಿಟಿ ರವಿ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಿದೆ. ಮತ್ತು ಮರಾಠ ಸಮುದಾಯದಿಂದ ಮಾರುತಿ ರಾವ್ ಮೂಳೆ ಹೆಸರು ಶಿಪಾರಸು ಮಾಡಲಾಗಿತ್ತು.
ವಿಧಾನಸಭೆ ಇಂದ ಪರಿಷತ್ ಸ್ಪರ್ಧಿಸುತ್ತಿರುವ ಹಿನ್ನೆಲೆ ನಾಳೆ 12 ಗಂಟಗೆ ಸಿಟಿ ರವಿ ನಾಮಿನೇಶನ್ ಸಲ್ಲಿಸಲಿದ್ದಾರೆ. ಇನ್ನು ಮಂಡ್ಯ ಸಂಸದೆ ಸುಮಲತಾಗೆ ಎಂಎಲ್‌ಸಿ ಟಿಕೆಟ್ ನೀಡಲಾಗುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಟಿಕೆಟ್ ಘೋಷಣೆಯಾಗಿಲ್ಲ. ಬಿಜೆಪಿಯ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

