ಬೆಂಗಳೂರು: 26/11 ಮುಂಬೈ ದಾಳಿಯ ವೀರ ನಾಯಕ, ಅಶೋಕ ಚಕ್ರ ಪುರಸ್ಕೃತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು (ಮಾರ್ಚ್ 15) ಅವರ ಪೋಷಕರಾದ ಕೆ. ಉನ್ನಿಕೃಷ್ಣನ್ ಮತ್ತು ಧನಲಕ್ಷ್ಮಿ ಅವರು ಬೆಂಗಳೂರಿನ ಯಲಹಂಕದಲ್ಲಿರುವ ‘ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ’ಯಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಮಗನ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸಿದ ಪೋಷಕರು, ಅವರ ನೆನಪಿನಲ್ಲಿ ಭಾವುಕರಾದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಗನ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹಸ್ರಾರು ಮಂದಿ “ನಮ್ಮ ಹೆಮ್ಮೆಯ ವೀರ ಯೋಧ”ನಿಗೆ ಜನ್ಮದಿನದ ಶುಭಾಶಯ ಕೋರಿ ಗೌರವ ಸಲ್ಲಿಸಿದ್ದಾರೆ.

View this post on Instagram

A post shared by News Karnataka (@newskarnataka)