ಬೆಂಗಳೂರು: ಹೆಲ್ಮೆಟ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸರ ಕೈಯನ್ನು ಬೈಕ್ ಸವಾರ ಕಚ್ಚಿದ ಘಟನೆ ವಿಲ್ಸನ್ ಗಾರ್ಡನ್ 10 ನೇ ಕ್ರಾಸ್ ಬಳಿ ನಡೆದಿದೆ.
ಬೈಕ್ ಸವಾರನೊಬ್ಬ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದ. ಇದನ್ನು ಗಮನಿಸಿದ ಕೂಡಲೇ ಸಂಚಾರಿ ಪೊಲೀಸರು ಬೈಕ್ ನಿಲ್ಲಿಸಿದ್ದರು. ಬಳಿಕ ಬೈಕ್ ಅನ್ನು ತಡೆದು ವಶಕ್ಕೆ ಪಡೆದುಕೊಳ್ಳುತ್ತಿದ್ದರು. ಇದೇ ವೇಳೆ ಕೋಪಗೊಂಡ ಬೈಕ್ ಸವಾರ ಸಂಚಾರಿ ಪೊಲೀಸ್ ಅಧಿಕಾರಿಯ ಕೈ ಕಚ್ಚಲು ಮುಂದಾಗಿದ್ದಾರೆ. ಕೂಡಲೇ ಹೊಯ್ಸಳ ಸಿಬ್ಬಂದಿ ಕರೆಸಿ ಬೈಕ್ ಸವಾರನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸರಿಂದ ಆರೋಪಿ ವಿರುದ್ಧ ದೂರು ದಾಖಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಹೆಲ್ಮೆಟ್ ರಹಿತ ಚಾಲಕನ ಫೋಟೋ ಹಿಡಿದಿದಕ್ಕೆ ಫೋಟೋ ಅಪ್ಲೋಡ್ ಮಾಡಿದರೆ ಫೋನ್ ಒಡೆದು ಹಾಕುವುದಾಗಿ ಅವಾಜ್ ಹಾಕಿ ಎಳೆದಾಡಿ ಪೋಲೀಸರ ಕೈಕಚ್ಚಿದ ಸವಾರ
ಪೋಲೀಸರ ಕೈ ಬಲ ಪಡಿಸಿ…@CMofKarnataka @CPBlr @Jointcptraffic @DCPSouthTrBCP @btppubliceye @wgardentrfps @karnatakakspcb @tdkarnataka @3rdEyeDude @RCBengaluru pic.twitter.com/KeePNw9qws— krjayathirtha (@krjayathirtha) February 12, 2024