ಬೆಂಗಳೂರು

ಬೆಂಗಳೂರಿನ ಮನೆ ಬಾಡಿಗೆ ದರಗಳಲ್ಲಿ ಶೇ 50ರಷ್ಟು ಏರಿಕೆ

ಬೆಂಗಳೂರು: ಬೆಂಗಳೂರಿನ ಟೆಕ್ ಕಾರಿಡಾರ್‌ಗಳಲ್ಲಿ ವಸತಿ ಮನೆಗಳ ಬಾಡಿಗೆ ದರಗಳು ವ್ಯಾಪಕವಾಗಿ ಏರಿಕೆ ಕಂಡಿವೆ. ಮಾರತಹಳ್ಳಿ, ಬೆಳ್ಳಂದೂರು ಮತ್ತು ವೈಟ್‌ಫೀಲ್ಡ್‌ನಂತಹ ಪ್ರತಿಷ್ಠಿತ ಏರಿಯಾಗಳಲ್ಲಿ ವಸತಿ ಬಾಡಿಗೆಗಳು ಶೇ 50 ಕ್ಕಿಂತ ಹೆಚ್ಚು ಏರಿಕೆಯಾಗಿವೆ.

ಕೋವಿಡ್ ನಂತರದಲ್ಲಿ ಸಾಪ್ಟ್‌ವೇರ್‌ ಕಂಪನಿಗಳಿಗೆ ಹತ್ತಿರ ಇರುವ ಮನೆಗಳಿಗೆ ಬೇಡಿಕೆ ಹೆಚ್ಚಾಗಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.

ಐಟಿ ಕಾರಿಡಾರ್‌ನ ಯಾವುದೇ ವಸತಿ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಕಡಿಮೆ ಇರುವ 2-ಬಿಎಚ್‌ಕೆ ಮನೆಗೆ ಬಾಡಿಗೆದಾರರು ತಿಂಗಳಿಗೆ ಕನಿಷ್ಠ 30,000 ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಕೋವಿಡ್‌ಗಿಂತ ಮೊದಲು 2- ಬಿಎಚ್‌ಕೆ ಮನೆಗಳು ಅಥವಾ ಫ್ಲಾಟ್‌ಗಳನ್ನು 12,000 ರಿಂದ 20,000 ರೂ ಗಳಿಗೆ ಬಾಡಿಗೆ ನೀಡಲಾಗುತ್ತಿತ್ತು. ಈಗ ಅದು 25,000 ರಿಂದ 40,000 ರೂ.ಗಳಾಗಿವೆ.

ಸಾಂಕ್ರಾಮಿಕ ಪೂರ್ವದಲ್ಲಿ ಇವುಗಳು ರೂ 7,000ದಿಂದ 10,000 ಕ್ಕೆ ಲಭ್ಯವಿದ್ದವು. ಹೆಚ್ಚಿನ ಬಾಡಿಗೆಯ ಹೊರತಾಗಿಯೂ, ಪ್ಲಾಟ್‌ಗಳ ಬೇಡಿಕೆ ಹೆಚ್ಚಿದೆ. ಸಾವಿರಾರು ಫ್ಲಾಟ್‌ಗಳು ಅಲ್ಪಾವಧಿಯಲ್ಲಿಯೇ ಬಾಡಿಗೆದಾರರನ್ನು ಪಡೆಯುತ್ತಿವೆ.

Sneha Gowda

Recent Posts

‘ಜೀವನಕ್ಕೆ ಹೊಸಬರು ಬರಲಿದ್ದಾರೆ’: ಕುತೂಹಲ ಮೂಡಿಸಿದ ಪ್ರಭಾಸ್ ಪೋಸ್ಟ್ ವೈರಲ್‌

ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ದರಲ್ಲಿಯೂ ನಟಿ ಅನುಷ್ಕಾ ಶೆಟ್ಟಿ ಜೊತೆಗಂತೂ ಪ್ರಭಾಸ್ ಮದುವೆಯೇ ಆಗಬಿಟ್ಟಿದ್ದಾರೆ…

1 min ago

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ.

9 mins ago

ಮಂತ್ರಿಮಾಲ್​ನ ಬೀಗ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಪ್ರತಿಷ್ಠಿತ ಮಂತ್ರಿಮಾಲ್ ನನ್ನು ಬಂದ್ ಮಾಡಲಾಗಿತ್ತು, ಮಾಲ್‌ ನ ಬೀಗ ತೆರೆಯುವಂತೆ ಬಿಬಿಎಂಪಿಗೆ…

26 mins ago

ಭಾರತದಲ್ಲಿ ಮೊಟೊರೊಲ ಎಡ್ಜ್ 50 ಫ್ಯೂಷನ್ ಬಿಡುಗಡೆ

ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಮೊಟೊರೊಲ ಕಂಪನಿ ಇದೀಗ ನೂತನ ಫೋನ್​ನೊಂದಿಗೆ ಬಂದಿದೆ.

27 mins ago

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ ಯತ್ನ, ಪ್ರತಿಭಟನೆ

ನಗರದಲ್ಲಿ ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು…

38 mins ago

ಅಕ್ರಮ ಅಡುಗೆ ಎಣ್ಣೆ ಮಾರಾಟ: ಚಾಲಕ ಪೊಲೀಸರ ವಶಕ್ಕೆ

ಅಕ್ರಮವಾಗಿ ಅಡುಗೆ ಎಣ್ಣೆ ಮಾರಾಟ ಮಾಡಿ ಲಾರಿ ಪಲ್ಟಿಯಾಗಿ ಎಣ್ಣೆ ಕಳುವಾಗಿದೆ ಎಂದು ಮಾಲೀಕರಿಗೆ ಸುಳ್ಳು ಹೇಳಿದ್ದ ಚಾಲಕ ಸಿಕ್ಕಿಬಿದ್ದಿರುವ…

39 mins ago