ಬೆಂಗಳೂರು: ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಇವರ ಸಹಭಾಗಿತ್ವದೊಂದಿಗೆ “ಬೆಂಗಳೂರು ಕೌಶಲ್ಯ ಶೃಂಗಸಭೆ 2025”ರ ಪ್ರಥಮ ಆವೃತ್ತಿಯನ್ನು ನವೆಂಬರ್ 04 ರಿಂದ 06 ರವರೆಗೆ ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ಆಯೋಜಿಸುತ್ತಿದೆ.

ಈ ಶೃಂಗಸಭೆಯು ಕರ್ನಾಟಕದ ಕೌಶಲ್ಯ ಮತ್ತು ಮಾನವ ಸಂಪನ್ಮೂಲವನ್ನು ಜಾಗತಿಕ ಉದ್ಯೋಗಾರ್ಹತೆಗೆ ತಯಾರಿಸುವ ಉದ್ದೇಶದಿಂದ ವಿದೇಶಿ ಸಹಭಾಗಿತ್ವಗಳ ವೃದ್ಧಿ, ಭಾಷಾ ತರಬೇತಿ ಮತ್ತು ಪ್ರಮಾಣಪತ್ರ ನೀಡುವ ವ್ಯವಸ್ಥೆಗಳಿಗೆ ಉತ್ತೇಜನ ನೀಡಲಾಗುತ್ತದೆ.

ಈ ಕಾರ್ಯಕ್ರಮವನ್ನು ನವೆಂಬರ್ 04 ರಂದು ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ರವರು ಉದ್ಘಾಟಿಸಲಿದ್ದಾರೆ. ಹಾಗೇಯೇ, ಈ ಕಾರ್ಯಕ್ರಮವನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ಘನ ಉಪಸ್ಥಿತಿಯಲ್ಲಿ ಹಾಗೂ ಮಾನ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖಾ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುತ್ತದೆ.

ಈ ಶೃಂಗಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಮಾರಿಷಸ್ ಗಣರಾಜ್ಯದ ಕಾರ್ಮಿಕ ಮತ್ತು ಕೈಗಾರಿಕಾ ಸಂಬಂಧಗಳ ಸಚಿವರಾದ ಮಾನ್ಯ ಮುಹಮ್ಮದ್ ರೆಝಾ ಖಾಸ್ಸಂ ಉತೀಮ್ ರವರು ಹಾಗೂ ಭಾರತಕ್ಕೆ ಜರ್ಮನಿ ರಾಷ್ಟ್ರದ ರಾಯಭಾರಿಗಳಾದ ಡಾ. ಫಿಲಿಪ್ ಅಕೆರ್ಮನ್ ರವರು ಮತ್ತು ಕೋರ್ಸೆರಾ ಸಂಸ್ಥೆಯ ಭಾರತ ಮತ್ತು ಏಷ್ಯಾ ಪೆಸಿಫಿಕ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅಶುತೋಷ್ ಗುಪ್ತಾ ರವರು ಸೇರಿದಂತೆ ಹಲವು ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.

 ಈ ಶೃಂಗಸಭೆಯ ಪ್ರಮುಖ ವಿಷಯಗಳು: 

“Workforce 2030: Scale, Systems, Synergy” — “ಮಾನವ ಸಂಪನ್ಮೂಲ 2030: ವಿಸ್ತರಣೆ, ವ್ಯವಸ್ಥೆಗಳು, ಸಮನ್ವಯ”

ಈ ವಿಷಯವು ರಾಜ್ಯದ ಕೌಶಲ್ಯಾಭಿವೃದ್ಧಿ ದೃಷ್ಟಿಯಲ್ಲಿ ಮೂರು ಪ್ರಮುಖ ಅಂಶಗಳನ್ನಾಗಿ ಸೂಚಿಸುತ್ತದೆ.:

1. ವಿಸ್ತರಣೆ (Scale): ಹೆಚ್ಚಿನ ಯುವಕರಿಗೆ ಕೌಶಲ್ಯಾವಕಾಶಗಳನ್ನು ವಿಸ್ತರಿಸುವುದು.

2. ವ್ಯವಸ್ಥೆಗಳು (Systems): ಗುಣಮಟ್ಟ ಮತ್ತು ಪ್ರಸ್ತುತತೆಯುಳ್ಳ ಕೌಶಲ್ಯ ತರಬೇತಿ ವ್ಯವಸ್ಥೆಗಳನ್ನು ಬಲಪಡಿಸುವುದು.

3. ಸಮನ್ವಯ (Synergy): ಸರ್ಕಾರ, ಕೈಗಾರಿಕೆ, ಮತ್ತು ಶಿಕ್ಷಣ ವಲಯಗಳ ನಡುವಿನ ಸಮನ್ವಯವನ್ನು ವೃದ್ಧಿಸುವುದು.

ಶೃಂಗಸಭೆಯ ಪ್ರಮುಖ ಅಂಶಗಳು:

⦁ 3,000ಕ್ಕೂ ಹೆಚ್ಚು ಭಾಗವಹಿಸುವವರು – (Policymakers, Corporate Leaders, Academic Experts, Innovators, etc.)

⦁ 100ಕ್ಕೂ ಹೆಚ್ಚು ಭಾಷಣಕಾರರು – (Global Leaders, Academic Pioneers, etc.)

⦁ 50ಕ್ಕೂ ಹೆಚ್ಚು ಪ್ರದರ್ಶಕರು ಮತ್ತು ಸಹಭಾಗಿದಾರರು, ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಪಾಲ್ಗೊಳ್ಳಲಿದ್ದಾರೆ.

ಈ ಶೃಂಗಸಭೆಯಲ್ಲಿ ಪ್ರಮುಖ ಭಾಷಣಕಾರರಾಗಿ ಶ್ರೀ ಸುಬ್ರತೋ ಬಾಗ್ಚಿ –ಮೈಂಡ್ಟ್ರೀ (Mindtree) ಸಂಸ್ಥೆಯ ಸಹ-ಸ್ಥಾಪಕರು ಹಾಗೂ ಮಾಜಿ ಅಧ್ಯಕ್ಷರು, ಒಡಿಶಾ ಕೌಶಲ್ಯಾಭಿವೃದ್ಧಿ ಪ್ರಾಧಿಕಾರ, ಶ್ರೀ ರವಿ ವೆಂಕಟೇಶನ್ – ಅಧ್ಯಕ್ಷರು, ಗ್ಲೋಬಲ್ ಎನರ್ಜಿ ಅಲಯನ್ಸ್ಹಾಗೂ ಮಾಜಿ ಅಧ್ಯಕ್ಷರು, ಮೈಕ್ರೋಸಾಫ್ಟ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡ, ಶ್ರೀ ಅತುಲ್ ಕುಮಾರ್ ತಿವಾರಿ, ಭಾ.ಆ.ಸೇ.(ನಿ) – ಮಾಜಿ ಕಾರ್ಯದರ್ಶಿಗಳು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಭಾರತ ಸರ್ಕಾರ.

ಶ್ರೀ ಬಿ.ವಿ.ಆರ್. ಸುಬ್ರಹ್ಮಣ್ಯಂ – ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO), ಶ್ರೀ ನವೀನ್ ನಾರಾಯಣನ್ – ಗ್ಲೋಬಲ್ ಹೆಡ್ – ಮಾನವ ಸಂಪನ್ಮೂಲ (HR), ಬಯೋಕಾನ್ ಬಯಾಲಾಜಿಕ್ಸ್, ಶ್ರೀಮತಿ ಸರಸ್ವತಿ ರಾಮಚಂದ್ರ – ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೈಟ್ಕಾಸ್ಟ್ ದೇಶದ ಮುಖ್ಯಸ್ಥರು, ಜೀ ಸೂನ್ ಸಾಂಗ್ – ನಿರ್ದೇಶಕರು (ದಕ್ಷಿಣ ಏಷ್ಯಾ), ಮಾನವ ಮತ್ತು ಸಾಮಾಜಿಕ ಅಭಿವೃದ್ಧಿ ವಿಭಾಗ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಫಿಲಿಪೈನ್ಸ್.

ಮಿಷ್ ಈಸ್ಟ್ಮನ್ – ಉಪ ಉಪಕುಲಪತಿ (ವೃತ್ತಿಪರ ಶಿಕ್ಷಣ) ಮತ್ತು ಉಪಾಧ್ಯಕ್ಷೆ, ಆರ್ಎಂಐಟಿ ವಿಶ್ವವಿದ್ಯಾಲಯ (RMIT University), ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯನ್ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಡೈರೆಕ್ಟರ್ಸ್ ಸದಸ್ಯರು. ಇವರ ಜೊತೆಗೆ ದೇಶ-ವಿದೇಶದ ಅನೇಕ ಗಣ್ಯರು ಮತ್ತು ತಜ್ಞರು ತಮ್ಮ ಅಮೂಲ್ಯ ಅನುಭವ ಮತ್ತು ದೃಷ್ಟಿಕೋನ ಹಂಚಿಕೊಳ್ಳಲಿದ್ದಾರೆ.

ನವೆಂಬರ್ 05 ರಂದು ಶೃಂಗಸಭೆಯ ವೇದಿಕೆಯಲ್ಲಿ “Convergence of Education, Skills & Industry for a Trillion USD Economy by 2032” ಎಂಬ ವಿಷಯದ ಕುರಿತು ಚರ್ಚಿಸಲು ವಿಶೇಷ ಸಚಿವರ ಸಮಿತಿಯನ್ನು (Ministerial Panel) ನಿಗದಿಪಡಿಸಲಾಗಿದೆ.

ಈ ಅಧಿವೇಶನದಲ್ಲಿ ಹಿರಿಯ ನೀತಿ ರೂಪಕರು ಹಾಗೂ ಉದ್ಯಮ ನಾಯಕರನ್ನು ಒಳಗೊಂಡಂತೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕಾ ಕ್ಷೇತ್ರಗಳ ನಡುವಿನ ಸಮನ್ವಯದ ಮೂಲಕ ಭಾರತವನ್ನು 2032ರೊಳಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಮುನ್ನಡೆಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಚರ್ಚೆಯು ನವೀನತೆ, ಉದ್ಯೋಗಾವಕಾಶ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಂಯೋಜಿತ ಪರಿಸರ ವ್ಯವಸ್ಥೆ (Integrated Ecosystem) ನಿರ್ಮಾಣದ ಅಗತ್ಯತೆಯನ್ನು ಪ್ರಸ್ತುತ ಪಡಿಸುತ್ತಿದೆ.

ಈ ವಿಶೇಷ ಸಚಿವರ ಸಮಿತಿಯ ಚರ್ಚಾತ್ಮಕ ಸಭೆಯಲ್ಲಿ ಡಾ. ಶರಣಪ್ರಕಾಶ್ ಆರ್. ಪಾಟೀಲ್ – ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖಾ ಸಚಿವರು, ಕರ್ನಾಟಕ ಸರ್ಕಾರ, ಡಾ. ಎಂ. ಬಿ. ಪಾಟೀಲ – ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖಾ ಸಚಿವರು, ಕರ್ನಾಟಕ ಸರ್ಕಾರ, ಶ್ರೀ ಪ್ರಿಯಾಂಕ್ ಖರ್ಗೆ – ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಮತ್ತು ಬಿಟಿ ಇಲಾಖಾ ಸಚಿವರು, ಕರ್ನಾಟಕ ಸರ್ಕಾರ, ಡಾ. ಎಂ. ಸಿ. ಸುಧಾಕರ್ – ಮಾನ್ಯ ಉನ್ನತ ಶಿಕ್ಷಣ ಇಲಾಖಾ ಸಚಿವರು, ಕರ್ನಾಟಕ ಸರ್ಕಾರ ಭಾಗವಹಿಸುವರು.

ನಿರ್ವಹಣೆ : ಶ್ರೀ ಮದನ್ ಪದಕಿ, ವ್ಯವಸ್ಥಾಪಕರು, Head Held High Foundation ಸಂಸ್ಥೆ.

ಶೃಂಗಸಭೆಯಲ್ಲಿ ಭಾಗವಹಿಸುವ ಕೈಗಾರಿಕಾ ವಲಯಗಳು:

⦁ ವಿಮಾನೋದ್ಯಮ ಮತ್ತು ರಕ್ಷಣಾ ವಲಯ (Aerospace & Defence)

⦁ ಕೃಷಿ ತಂತ್ರಜ್ಞಾನ (AgriTech)

⦁ ವಾಹನೋದ್ಯಮ (Automotive)

⦁ ಆಸ್ತಿ ಮತ್ತು ನಿರ್ಮಾಣ ವಲಯ (Real Estate)

⦁ ಬ್ಯಾಂಕಿಂಗ್ ಮತ್ತು ಹಣಕಾಸು (Banking & Finance)

⦁ ಶಿಕ್ಷಣ (Education)

⦁ ಆರೋಗ್ಯ ರಕ್ಷಣೆ (Healthcare) ⦁ ಉತ್ಪಾದನೆ (Manufacturing),

⦁ ಮಾಧ್ಯಮ (Media)

⦁ ವ್ಯಾಪಾರ (Retail),

⦁ ಸಾಫ್ಟ್ವೇರ್ ಮತ್ತು ತಂತ್ರಜ್ಞಾನ (Software & IT)

⦁ ದೂರಸಂಪರ್ಕ (Telecommunications)

⦁ ಆತಿಥ್ಯ ಮತ್ತು ಪ್ರವಾಸೋದ್ಯಮ (Hospitality & Tourism)

⦁ ಇತರೆ ವಲಯಗಳು

ಈ ಶೃಂಗಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಸಿಗುವ ಅವಕಾಶಗಳು:

1. ಹೊಸದಾಗಿ ಕೌಶಲ್ಯ ನವೀಕರಣಗಳನ್ನು (Emerging Skilling Innovations) ತಿಳಿದುಕೊಳ್ಳುವ ಅವಕಾಶ.

2. ಸರ್ಕಾರ ಹಾಗೂ ಕೈಗಾರಿಕಾ ವಲಯದ ಪ್ರಮುಖ ನಾಯಕರೊಂದಿಗೆ ನೇರ ಸಂಪರ್ಕ ಹಾಗೂ ಸಂವಾದಿಸುವ ಅವಕಾಶ.

3. ಪ್ರತ್ಯಕ್ಷ ಪ್ರದರ್ಶನಗಳು (Live Showcases) ಹಾಗೂ ನೀತಿ ಸಂವಾದಗಳು (Policy Dialogues) ಗಳಲ್ಲಿ ಪಾಲ್ಗೊಳ್ಳುವ ಅವಕಾಶ.

4. ಉದ್ಯೋಗ, ತರಬೇತಿ ಹಾಗೂ ಸಹಭಾಗಿತ್ವದ ಹೊಸ ಅವಕಾಶಗಳನ್ನು ಅನ್ವೇಷಿಸುವ ಅವಕಾಶ.

ಶೃಂಗಸಭೆಯ ಪ್ರಮುಖ ಆಕರ್ಷಣೆಗಳು: ವಿವಿಧ ವಿಶಿಷ್ಟ ಕಾರ್ಯಕ್ರಮಗಳು ಮತ್ತು ಆಕರ್ಷಣೆಗಳನ್ನು ಒಳಗೊಂಡಿವೆ.

⦁ Skillathon 2025: ಇದು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ರಾಷ್ಟ್ರಮಟ್ಟದ ನವೀನತಾ ಸ್ಪರ್ಧೆಯಾಗಿದ್ದು, ಯುವಜನತೆಯ ಸೃಜನಾತ್ಮಕ ಚಿಂತನೆಗಳನ್ನು ಪ್ರೇರೇಪಿಸಿ, ಭಾರತದ ಕೌಶಲ್ಯ ಪರಿಸರ ವ್ಯವಸ್ಥೆಯನ್ನು (Skilling Ecosystem) ಹೊಸದಾಗಿ ರೂಪಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಭವಿಷ್ಯದ ಉದ್ಯೋಗ ಜಗತ್ತಿಗೆ ಸೂಕ್ತವಾದ ಪರಿಹಾರಗಳನ್ನು ವಿನ್ಯಾಸಗೊಳಿಸುವ  ಅವಕಾಶವನ್ನು ಪಡೆಯಲಿದ್ದಾರೆ.

⦁ ಕೌಶಲ್ಯ ಕರ್ನಾಟಕ ಪ್ರಶಸ್ತಿ (Kaushalya Karnataka Awards): ರಾಜ್ಯದ ಕೈಗಾರಿಕೆಗಳು ಮತ್ತು ಸಂಸ್ಥೆಗಳ ಸಾಧನೆಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವಾಗಿದೆ. ಇದರ ಮೂಲಕ ರಾಜ್ಯದ ಸಮತೋಲನ ಅಭಿವೃದ್ಧಿ (Inclusive Growth), ನವೀನತೆ (Innovation) ಮತ್ತು ಮಾನವ ಸಂಪನ್ಮೂಲದ ಸ್ಪರ್ಧಾತ್ಮಕತೆಯನ್ನು (Workforce Competitiveness) ಉತ್ತೇಜಿಸುವ ಮಾದರಿ ಉಪಕ್ರಮಗಳನ್ನು ಪ್ರಸ್ತುತಪಡಿಸಲಾಗುತ್ತದೆ.

⦁ Skill Expo Pavilion: ರಾಜ್ಯದೆಲ್ಲೆಡೆ ಮಾನವ ಸಂಪನ್ಮೂಲದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದ ಕಾರ್ಯಕ್ರಮವಾಗಿದೆ. ಇಲ್ಲಿ ಅತ್ಯಾಧುನಿಕ ತರಬೇತಿ ತಂತ್ರಜ್ಞಾನಗಳು, ಶೈಕ್ಷಣಿಕ ತಂತ್ರಜ್ಞಾನ (EdTech) ಪರಿಹಾರಗಳು, ಹಾಗೂ ಭವಿಷ್ಯಮುಖಿ ಕೌಶಲ್ಯಾಭಿವೃದ್ಧಿಯ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಲಾಗುತ್ತದೆ.

⦁ ಸಾಂಸ್ಕೃತಿಕ ಕಾರ್ಯಕ್ರಮ – ಕರ್ನಾಟಕ ವೈಭವ (Karnataka Vaibhava): ಇದು ಕರ್ನಾಟಕದ ಸಮೃದ್ಧ ಪರಂಪರೆ, ಕಲೆ, ಸಂಸ್ಕೃತಿ ಮತ್ತು ಜನಪದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಭವ್ಯ ಸಾಂಸ್ಕೃತಿಕ ಪ್ರದರ್ಶನ. ಇದು ರಾಜ್ಯದ ಸಾಂಸ್ಕೃತಿಕ ಗೌರವ ಮತ್ತು ವೈಭವವನ್ನು ಜನರಿಗೆ ಪರಿಚಯಿಸುವ ವಿಶಿಷ್ಟ ಆಯ್ಕೆ ಆಗಿರುತ್ತದೆ.

ಶೃಂಗಸಭೆಯಲ್ಲಿ ಅನೇಕ ವಿಶಿಷ್ಟ ಅಧಿವೇಶನಗಳು ಹಾಗೂ ಚಟುವಟಿಕೆಗಳ ವಿವರ:

ಈ ಶೃಂಗಸಭೆಯು ಮಾಸ್ಟರ್ಕ್ಲಾಸ್ಗಳು, ಆಳವಾದ ಚರ್ಚಾತ್ಮಕ ಅಧಿವೇಶನಗಳು (Deep-dive Sessions), ನೀತಿ ಚರ್ಚಾ ವೇದಿಕೆಗಳು (Policy Roundtables) ಮತ್ತು ಯುವ ವಲಯ (Youth Zone) ಎಂಬ ವಿಶಿಷ್ಟ ವಿಭಾಗವನ್ನು ಒಳಗೊಂಡಿದೆ. ಈ ಯುವ ವಲಯವು ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರನ್ನು ಉದ್ಯೋಗ ಮತ್ತು ವೃತ್ತಿ ಅವಕಾಶಗಳೊಂದಿಗೆ ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಶೃಂಗಸಭೆಯ ಚರ್ಚೆಗಳು ನಾಲ್ಕು ಪ್ರಮುಖ ವಿಷಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿವೆ:

1. ಕೌಶಲ್ಯಾಭಿವೃದ್ಧಿಯಲ್ಲಿ ಹೊಸ ಆಲೋಚನೆಗಳು – ತರಬೇತಿ ಮತ್ತು ಕಲಿಕೆಯ ನವೀನ ವಿಧಾನಗಳನ್ನು ಪರಿಚಯಿಸುವುದು.

2. ಎಲ್ಲರಿಗೂ ಕೌಶಲ್ಯ (Skills for Everyone) – ಮಹಿಳೆಯರು, ಯುವಕರು ಮತ್ತು ಗಿಗ್ವರ್ಕರ್ಗಳನ್ನು ಒಳಗೊಂಡಂತೆ ಎಲ್ಲ ವರ್ಗಗಳಿಗೂ ಸಮಾನ ಕೌಶಲ್ಯಾವಕಾಶಗಳನ್ನು ಒದಗಿಸುವುದು.

3. ಜಾಗತಿಕ ಕೌಶಲ್ಯ (Global Skills) – ಕರ್ನಾಟಕದ ಯುವಕರನ್ನು ಅಂತರರಾಷ್ಟ್ರೀಯ ಉದ್ಯೋಗಗಳಿಗೆ ಸಜ್ಜುಗೊಳಿಸುವುದು.

4. ಭವಿಷ್ಯಮುಖಿ ಕೌಶಲ್ಯ (Future-ready Skills) – ಕೃತಕ ಬುದ್ಧಿಮತ್ತೆ (AI), ಹಸಿರು ಉದ್ಯೋಗಗಳು (Green Jobs) ಮತ್ತು ಡಿಜಿಟಲ್ ಜಗತ್ತಿನಂತಹ ಹೊಸ ಕ್ಷೇತ್ರಗಳಿಗೆ ಯುವಕರನ್ನು ತಯಾರಿಸುವುದು.

ಈ ಮೂಲಕ ಶೃಂಗಸಭೆ ರಾಜ್ಯದ ಕೌಶಲ್ಯ ಪರಿಸರವನ್ನು ನವೀಕರಿಸುವ ಜೊತೆಗೆ, ವಿಶ್ವ ಮಟ್ಟದ ಉದ್ಯೋಗ ಸ್ಪರ್ಧೆಗೆ ಯುವಕರನ್ನು ಸಿದ್ಧಗೊಳಿಸುವ ಮಹತ್ವದ ವೇದಿಕೆಯಾಗಿ ಪರಿಣಮಿಸುತ್ತದೆ.

1. ಈ ಹೊಸ ಉಪಕ್ರಮದ ಕುರಿತು ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ರವರು ಮಾನ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

“ಬೆಂಗಳೂರು ಕೌಶಲ್ಯ ಶೃಂಗಸಭೆ ಭಾರತವನ್ನು ಮುಂದಿನ ಮಾನವ ಸಂಪನ್ಮೂಲ ಅಭಿವೃದ್ಧಿಯ ಕಡೆಗೆ ಮುನ್ನಡೆಸುವಲ್ಲಿ ಕರ್ನಾಟಕದ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರಾಥಮಿಕ ಗುರಿಯು ಸಮಾವೇಶಕ, ಕೈಗಾರಿಕಾ ಅವಶ್ಯಕತೆಗಳಿಗೆ ಹೊಂದಿಕೊಂಡು, ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಇರುವ ಕೌಶಲ್ಯಾಭಿವೃದ್ಧಿ ಚೌಕಟ್ಟನ್ನು ನಿರ್ಮಿಸುವುದಾಗಿದೆ. ಇದರಿಂದ ಯುವಜನರು ಕೌಶಲ್ಯಸಂಪನ್ನ ವೃತ್ತಿಪರರು, ಆವಿಷ್ಕಾರಕರು ಅಥವಾ ಉದ್ಯಮಿಗಳು ಆಗಿ ಭವಿಷ್ಯದ ಆರ್ಥಿಕತೆಯನ್ನು ರೂಪಿಸಲು ಶಕ್ತಿಶಾಲಿಗಳಾಗುತ್ತಾರೆ.”

2. ಈ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತಾ, ಡಾ. ಗಾಯತ್ರಿ ವಾಸುದೇವನ್, ಅಧ್ಯಕ್ಷೆ – ಲೇಬರ್ನೆಟ್ ಸರ್ವಿಸಸ್ ಇಂಡಿಯಾ ಪ್ರೈ. ಲಿ. ಮತ್ತು ಟ್ರಸ್ಟಿ – ಸಂಭವ ಫೌಂಡೇಶನ್ ರವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

“ಬೆಂಗಳೂರು ಕೌಶಲ್ಯ ಶೃಂಗಸಭೆಯ ಉದ್ದೇಶ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ನವೀನ ಆಲೋಚನೆಗಳನ್ನು ಒಂದೇ ವೇದಿಕೆಗೆ ಒಗ್ಗೂಡಿಸುವುದು. ಇದರ ಮೂಲಕ ಕೌಶಲ್ಯಾಭಿವೃದ್ಧಿಯು ಯುವಜನತೆಗೆ ನಿಜವಾದ ಉದ್ಯೋಗಾವಕಾಶವನ್ನು ಅರ್ಥಪೂರ್ಣ ಉದ್ಯೋಗಾವಕಾಶಗಳನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಅನ್ವೇಷಿಸುವುದಾಗಿದೆ.”

ಭಾರತದ ಭವಿಷ್ಯದ ಮಾನವ ಸಂಪನ್ಮೂಲವನ್ನು ರೂಪಿಸಲು ಇದೇ ನವೆಂಬರ್ 04 ರಿಂದ 06 ರವರೆಗೆ ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ಆಯೋಜಿಸಲಾಗಿರುವ ಈ “ಬೆಂಗಳೂರು ಕೌಶಲ್ಯ ಶೃಂಗಸಭೆ”ಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ: 🌐 https://bengaluruskillsummit.com/ ಗೆ ಭೇಟಿ ನೀಡಿ.